ಪಂಜಾಬ್‌ನಲ್ಲಿ I.N.D.I.A ಪಕ್ಷಗಳ ಮಧ್ಯೆ ಭುಗಿಲೆದ್ದ ಭಿನ್ನಮತ!

masthmagaa.com:

ಪಂಜಾಬ್‌ನ ಆಮ್‌ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್‌ ಮಧ್ಯೆ ಲೋಕಸಭೆ ಎಲೆಕ್ಷನ್‌ ಮುನ್ನವೇ ಅಸಮಾಧಾನ ಸ್ಪೋಟಗೊಂಡಂತೆ ಕಾಣ್ತಿದೆ. ಈಗಾಗಲೇ INDIA ಕೂಟದ ಭಾಗವಾಗಿರುವ ಉಭಯ ಪಕ್ಷಗಳು ಪಂಜಾಬ್‌ನಲ್ಲಿ ಮಾತ್ರ ಪ್ರತ್ಯೇಕವಾಗಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸೋ ಇಂಗಿತ ವ್ಯಕ್ತ ಪಡಿಸಿವೆ. ʻನಮಗೆ ಕಳೆದ ವರ್ಷ ಪಂಜಾಬ್‌ ವಿಧಾನಸಭಾ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳೋಕೆ ಇಷ್ಟವಿರಲಿಲ್ಲ. ಮುಂದಿನ ಲೋಕಸಭಾ ಚುನಾವಣೆಗೂ ಇಷ್ಟವಿಲ್ಲʼ ಅಂತ ಆಪ್ ಹೇಳ್ತಿದೆ. ಇತ್ತ ಪಂಜಾಬ್‌ ಕಾಂಗ್ರೆಸ್‌ ಕೂಡ ನಾವು ಅಮರಿಂದರ್‌ ಸಿಂಗ್‌ ನೇತೃತ್ವದಲ್ಲಿ 13 ಲೋಕಸಭಾ ಕ್ಷೇತ್ರಗಳಲ್ಲೂ ಪ್ರತ್ಯೇಕವಾಗಿ ಸ್ಫರ್ಧೆ ಮಾಡ್ತೀವಿ. ಒಂದು ವೇಳೆ ಬೇರೆ ನಿರ್ಧಾರ ಕೈಗೊಳ್ಳುವ ಪ್ರಸಂಗ ಬಂದ್ರೆ ಎಲ್ಲರ ಒಪ್ಪಿಗೆ ಮೇರೆಗೆ ಅಮರಿಂದರ್‌ ಸಿಂಗ್‌ ಮುಂದಿನ ನಿರ್ಧಾರ ಕೈಗೊಳ್ತಾರೆ ಅಂತ ಹೇಳ್ಕೊಂಡಿದೆ.

-masthmagaa.com

Contact Us for Advertisement

Leave a Reply