ಡಿಕೆಶಿಗೆ ಮತ್ತೆ ಸಂಕಷ್ಟ..! ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಅಕ್ರಮ ಹಣವರ್ಗಾವಣೆ ಕೇಸಲ್ಲಿ ಒಳಗೆ ಹೋಗಿರುವ ಡಿ.ಕೆ ಶಿವಕುಮಾರ್‍ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ ಅನ್ಸುತ್ತೆ. ಯಾಕಂದ್ರೆ ದೆಹಲಿ ಹೈಕೋರ್ಟ್ ಕೂಡ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ. ಅಲ್ಲದೆ ಅಕ್ಟೋಬರ್ 14ರೊಳಗೆ ಆಕ್ಷೇಪಣೆ ಸಲ್ಲಿಸಲು ಕೂಡ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಅವಕಾಶ ನೀಡಿದೆ. ಇದರಿಂದ ಅಕ್ಟೋಬರ್ 14ರವರೆಗೆ ಡಿಕೆಶಿ ಜಾಮೀನಿಗಾಗಿ ಕಾಯಲೇಬೇಕಾಗಿದೆ. ಇನ್ನು ಡಿಕೆಶಿಯ ನ್ಯಾಯಾಂಗ ಬಂಧನ ನಾಳೆಗೆ ಮುಗಿಯುತ್ತಿದ್ದು, ಪುನಃ ದೆಹಲಿಯ ರೋಸ್ ಅವೆನ್ಯೂ ಕೋರ್ಟ್‍ಗೆ ಹಾಜರಾಗಲಿದ್ದಾರೆ.

Contact Us for Advertisement

Leave a Reply