ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಅಂತ ಬದಲಿಸ್ತೇವೆ: ಡಿಸಿಎಂ ಶಿವಕುಮಾರ್‌

masthmagaa.com:

ಡಿಸಿಎಂ ಡಿ. ಕೆ.ಶಿವಕುಮಾರ್‌ ಇಡೀ ರಾಮನಗರ ಜಿಲ್ಲೆ ಬೆಂಗಳೂರಿಗೆ ಸೇರಿದ್ದು. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಅಂತ ಹೆಸರು ಬದಲಿಸ್ತೇವೆ ಅಂತ ಹೇಳಿ ವಿವಾದ ಸೃಷ್ಟಿಸಿದ್ದಾರೆ. ಇಂದು ಬೆಳಿಗ್ಗೆ ಅಷ್ಟೇ ಈ ಬಗ್ಗೆ ಚಿಂತನೆ ನಡೆಸಲಾಗಿದೆ ಅಂತ X ನಲ್ಲಿ ಪೋಸ್ಟ್‌ ಒಂದನ್ನ ಹಾಕಿದ್ರು. ಈ ಬಗ್ಗೆ ಖಾರವಾಗಿ ಪ್ರತಿಕ್ರಿಸಿರುವ ಮಾಜಿ ಸಿಎಂ ಎಚ್.‌ ಡಿ. ಕುಮಾರಸ್ವಾಮಿ “ಇನ್ನು ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ. ಕನಕಪುರವನ್ನು ಬೆಂಗಳೂರಿಗೆ ಸೇರಿಸಬೇಕೆನ್ನುವುದರ ಹಿಂದೆ ಅವರ ವೈಯಕ್ತಿಕ ಹಿಸಾಸಕ್ತಿ ಇದೆ” ಅಂತ ಆರೋಪಿಸಿದ್ದಾರೆ. ಈ ಬೆನ್ನಲ್ಲೇ ರಾಮನಗರವನ್ನ ಬೆಂಗಳೂರಿಗೆ ಸೇರಿಸೋದು ಕನ್‌ಫರ್ಮ್‌ ಅಂತ ಶಿವಕುಮಾರ್‌ ಹೇಳಿದ್ದಾರೆ. ಇತ್ತ ಈ ಕುರಿತು ಪ್ರತಿಕ್ರಿಯಿಸಿರೋ ಸಿಎಂ ಸಿದ್ಧರಾಮಯ್ಯ ನನಗೆ ಇದರ ಬಗ್ಗೆ ಗೊತ್ತಿಲ್ಲ. ಡಿಸಿಎಂ ಈ ವಿಚಾರವಾಗಿ ನನ್ನ ಜೊತೆ ಡಿಸ್ಕಸ್ ಮಾಡಿಲ್ಲ ಅಂದಿದ್ದಾರೆ. ಅಂದ್ಹಾಗೆ 2007 ರಲ್ಲಿ JDS-BJP ಸರ್ಕಾರದ ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ‌ ಡಿ. ಕೆ. ಶಿವಕುಮಾರ್ ಕ್ಷೇತ್ರವಾದ ಕನಕಪುರ ಸೇರಿ 4 ತಾಲ್ಲೂಕುಗಳನ್ನೊಳಗೊಂಡ ರಾಮನಗರ ಜಿಲ್ಲೆ ಉಗಮ ಆಗಿತ್ತು.

-masthmagaa.com

Contact Us for Advertisement

Leave a Reply