masthmagaa.com:

ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿರೋ ಯುವತಿಯು ತನ್ನ ಸಹೋದರನ ಜೊತೆ ಈ ಹಿಂದೆ ಮೊಬೈಲ್​ನಲ್ಲಿ ಮಾತನಾಡಿರೋ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಮಹಾನಾಯಕನ ಹೆಸರು ಕೂಡ ಬಯಲಾಯ್ತಾ ಅನ್ನೋ ಅನುಮಾನ ಮೂಡಿದೆ. ಆಡಿಯೋದಲ್ಲಿ ಏನಿದೆ ಅಂದ್ರೆ.. ಯುವತಿ ತನ್ನ ತಮ್ಮನಿಗೆ ಏನ್ ಹೇಳ್ತಾಳೆ ಅಂದ್ರೆ, ವಿಡಿಯೋದಲ್ಲಿರೋದು ನಾನಲ್ಲ. ಅದನ್ನ ಎಡಿಟ್ ಮಾಡಿ ಬೇರೆವರ ವಾಯ್ಸ್ ಹಾಕಲಾಗಿದೆ. ನನ್ನ ಹತ್ರ ಬೇರೆ ವಿಡಿಯೋ ಇದೆ ಅಂತಾಳೆ. ಅದನ್ನ ಕಳ್ಸು ಅಂತ ತಮ್ಮ ಹೇಳ್ತಾನೆ. ಆಗ ಯುವತಿಯು ಡಿ.ಕೆ. ಶಿವಕುಮಾರ್ ಕಡೆಯವರು ಯಾರೋ ಇದ್ದಾರೆ.. ಅವರು ಆಚೆ ಹೋಗಿದ್ದಾರೆ.. ಅವರ ಹತ್ರ ಆ ವಿಡಿಯೋ ಇದೆ. ಅವರು ಬಂದಮೇಲೆ ಕಳಿಸ್ತೀನಿ ಅಂತ ಯುವತಿ ಹೇಳ್ತಾಳೆ. ಆಗ ಆಕೆಯ ತಮ್ಮ ಡಿ.ಕೆ. ಶಿವಕುಮಾರ್, ಅವ್ರು ಇವ್ರು.. ಇವೆಲ್ಲಾ ನಿಂಗೆ ಬೇಕಾ.. ಮೂರೊತ್ತು ಊಟ ಮಾಡಿದ್ರೆ ಸಾಕು ಅಂತಾನೆ. ಆಗ ಯುವತಿಯ ಸ್ನೇಹಿತ ಆಕಾಶ್ ಹಾಗೆಲ್ಲಾ ಏನಾಗಲ್ಲ ಅಂತ ಹೇಳಿ ತಮ್ಮನಿಗೆ ಸಮಾಧಾನ ಮಾಡುವ ಪ್ರಯತ್ನ ಮಾಡ್ತಾನೆ.

-masthmagaa.com

Contact Us for Advertisement

Leave a Reply