ರಷ್ಯಾದ ಮೇಲೆ ಅಮೆರಿಕ ಪತ್ರಿಕಾ ಸ್ವಾತಂತ್ರ್ಯ ಹರಣ ಆರೋಪ!

masthmagaa.com:

ಸ್ವತಂತ್ರ ಸುದ್ಧಿ ಮಾಧ್ಯಮಗಳನ್ನ ಬ್ಲಾಕ್‌ ಮಾಡೋದ್ರ ಮೂಲಕ ‘ಪತ್ರಿಕಾ ಸ್ವಾತಂತ್ಯ ಮತ್ತು ಸತ್ಯʼದ ಮೇಲೆ ರಷ್ಯಾ ಯುದ್ಧ ಸಾರಿದೆ ಅಂತ ಅಮೇರಿಕ ರಷ್ಯಾ ಮೇಲೆ ಆರೋಪ ಮಾಡಿದೆ. ಈ ಸಂಬಂಧ ಹೇಳಿಕೆ ನೀಡಿರೋ ಅಮೇರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌, ರಷ್ಯಾ ತನ್ನ ಜನತೆ ಯುಕ್ರೇನ್‌ ದಾಳಿ ಬಗೆಗಿನ ಸುದ್ಧಿ ತಿಳಿದಿರೋ ಹಾಗೆ ಮಾಧ್ಯಮಗಳನ್ನ ಬ್ಲಾಕ್‌ ಮಾಡ್ತಿದೆ. ಜೊತೆಗೆ ಲಕ್ಷಾಂತರ ಜನ ಬಳಸೋ ಟ್ವಟರ್‌, ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂಗಳನ್ನ ಕೂಡ ಉಸಿರುಗಟ್ಟಿಸ್ತಿದೆ ಅಂತ ಹೇಳಿದೆ.
-ಇನ್ನು ಮತ್ತೊಂದ್‌ ಕಡೆ, ರಷ್ಯಾ ಮೂಲದ ಮಾಧ್ಯಮ ರಷ್ಯನ್‌ ಟುಡೇ ಹಿಂದೆ ಬೆನ್ ಬಿದ್ದಿರೋ ಬ್ರಿಟನ್‌, ಅದ್ರ ವಿರುದ್ಧ ಮತ್ತೆ ಒಂದ್‌ ಡಜನ್‌ ತನಿಖೆಗಳನ್ನ ಮಾಡೋದಾಗಿ ಘೋಷಿಸಿದೆ. ಇನ್ನು ಈ ಬಗ್ಗೆ ಹೇಳಿಕೆ ಪ್ರಕಟಿಸಿರೋ ಬ್ರಿಟನ್‌ನ ಪ್ರಸಾರ ನಿಯಂತ್ರಣ ʼಆಫ್‌ಕಾಂʼ, ರಷ್ಯನ್‌ ಟುಡೇಯಲ್ಲಿ ಪ್ರಸಾರ ಆದ ಕಾರ್ಯಕ್ರಮಗಳ ನಿಷ್ಪಕ್ಷಪಾತದ ಬಗ್ಗೆ ಒಟ್ಟು ಈಗ 27 ತನಿಖೆಗಳು ನಡೆಯುತ್ತಿದ್ದು, ಈಗ ಇವರ ಯುಕೆ ಲೈಸನ್ಸ್‌ ರದ್ದು ಮಾಡ್ಬೇಕಾ ಅನ್ನೋದ್ರ ಬಗ್ಗೆ ಯೋಚ್ನೆ ಮಾಡ್ತಿದ್ದೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply