ಡಾನ್​ಬಾಸ್​​ಗೆ ಸೀಮಿತವಾಗುತ್ತಾ ರಷ್ಯಾದ ದಾಳಿ?

masthmagaa.com:

ರಷ್ಯಾ ಅಧ್ಯಕ್ಷ ಪುಟಿನ್ ತಲೆಯಲ್ಲಿ ಏನ್ ಓಡ್ತಿದೆ ಅನ್ನೋದೇ ಯಾರಿಗೂ ಅರ್ಥವಾಗ್ತಿಲ್ಲ.. ಕೆಲವರು ಪುಟಿನ್ ತನ್ನ ಯುದ್ಧದ ತಂತ್ರವನ್ನು ಯುಕ್ರೇನ್ ಮೇಲೆ ಬೆಲಾರುಸ್ ಕಡೆಯಿಂದ ದೊಡ್ಡಮಟ್ಟದ ದಾಳಿ ನಡೆಸಬಹುದು ಅಂತಿದ್ರೆ, ಇನ್ನು ಕೆಲ ಪಾಶ್ಚಿಮಾತ್ಯ ತಜ್ಞರು ಪುಟಿನ್ ಯುಕ್ರೇನ್​​​​​​ನ ದೊಡ್ಡಮಟ್ಟದ ಭೂಭಾಗ ವಶಕ್ಕೆ ಪಡೆಯೋ ಬದಲು ಡಾನ್​ಬಾಸ್ ಪ್ರದೇಶಕ್ಕೆ ಸೀಮಿತವಾಗಬಹುದು.. ಯುಕ್ರೇನ್​ನ ದೊಡ್ಡ ಭೂಭಾಗವನ್ನು ವಶಕ್ಕೆ ಪಡೆಯೋ ತಮ್ಮ ಯೋಜನೆಯನ್ನು ಕೈಬಿಡಬಹುದು ಅಂತ ಅಂದಾಜಿಸಿದ್ದಾರೆ. ಯುಕ್ರೇನ್ ಮೇಲೆ ದಾಳಿ ನಡೆಸುವಾಗ ಕೆಲವೇ ದಿನಗಳಲ್ಲಿ ಯುಕ್ರೇನ್​​ನ್ನು ಕಂಟ್ರೋಲ್​ಗೆ ತಗೊಳ್ಬೋದು.. ಅಲ್ಲಿ ಸರ್ಕಾರವನ್ನು ಬದಲಿಸಬಹುದು ಅನ್ನೋದು ಪುಟಿನ್ ಲೆಕ್ಕಾಚಾರವಾಗಿತ್ತು. ಆದ್ರೀಗ ಲೆಕ್ಕಾಚಾರ ತಲೆಕೆಳಗಾಗಿದ್ದು, 4 ವಾರ ಕಳೆದ್ರೂ ದೊಡ್ಡಮಟ್ಟದ ಮುನ್ನಡೆ ಸಿಕ್ಕಿಲ್ಲ. ಹೀಗಾಗಿ ಡಾನ್​ಬಾಸ್​​​ಗೆ ತನ್ನ ಆಕ್ರಮಣ ಸೀಮಿತಗೊಳಿಸೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply