ಪ್ರವಾಸಿ ಮತ್ತು ಧಾರ್ಮಿಕ ಸ್ಥಳ ಬಾಗಿಲು ತೆರೆಯಬಾರದಿತ್ತು!

masthmagaa.com:

ದೇಶದಲ್ಲಿ ಕೊರೋನಾದ 2ನೇ ಅಲೆ ಇಳಿಕೆಯಾಗ್ತಿದ್ದು, ಕಂಪ್ಲೀಟಾಗಿ ಹೋಗಿಲ್ಲ. ಈ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ವಿರುದ್ಧದ ಹೋರಾಟವನ್ನು ನಿಲ್ಲಿಸಬಾರದು ಅಂತ ಐಎಂಎ ಅಂದ್ರೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮನವಿ ಮಾಡಿದೆ. ಜೊತೆಗೆ ಅಂತಾರಾಷ್ಟ್ರೀಯ ಸಂಸ್ಥೆಗಳ ವರದಿಗಳು, ಸಾಕ್ಷ್ಯಗಳು ಮತ್ತು ಈವರೆಗಿನ ಮಹಾಮಾರಿಗಳ ಇತಿಹಾಸ ಗಮನಿಸಿದ್ರೆ ಕೊರೋನಾ 3ನೇ ಅಲೆ ಬಂದೇ ಬರುತ್ತೆ. ಮತ್ತು ಹತ್ತಿರದಲ್ಲೇ ಇದೆ.. ಆದ್ರೆ ದೇಶದ ವಿವಿಧ ಭಾಗಗಳಲ್ಲಿ ಅಧಿಕಾರಿಗಳು ಮತ್ತು ಜನರು ಕೊರೋನಾ ವಿರುದ್ಧದ ಹೋರಾಟದ ಅಸ್ತ್ರವನ್ನೇ ಕೆಳಗಿಟ್ಟಿದ್ದಾರೆ.. ರೂಲ್ಸ್ ಫಾಲೋ ಮಾಡ್ತಿಲ್ಲ. ಗುಂಪು ಗುಂಪಾಗಿ ಜನ ಸೇರ್ತಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದೆ. ಸುತ್ತಾಟ, ಧಾರ್ಮಿಕ ಯಾತ್ರೆ, ಧಾರ್ಮಿಕ ಸಮಾರಂಭಗಳು ಮುಖ್ಯ ನಿಜ. ಆದ್ರೆ ಅದಕ್ಕೆ ಇನ್ನೂ ಸ್ವಲ್ಪ ತಿಂಗಳು ಕಾದ್ರೆ ಒಳ್ಳೆಯದು. ಅದು ಬಿಟ್ಟು ಈಗಲೇ ಪ್ರವಾಸೋದ್ಯಮ ಮತ್ತು ಧಾರ್ಮಿಕ ಸ್ಥಳಗಳನ್ನು ತೆರೆಯೋದು, ಲಸಿಕೆ ಹಾಕಿಸಿಕೊಳ್ಳದೇ ಜನ ಗುಂಪು ಗುಂಪಾಗಿ ಸೇರೋದು ಮೂರಲೇ ಅಲೆಗೆ ಕಾರಣವಾಗಲಿದೆ ಅಂತ ಐಎಂಎ ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply