ಹಿಜಬ್ ವಿವಾದ: ಅಜಿದಾರರ ವಕೀಲರಿಗೆ ಸುಪ್ರೀಂಕೋರ್ಟ್ ಛೀಮಾರಿ

masthmagaa.com:

ಕ್ಲಾಸ್​​ರೂಂ ಒಳಗೆ ಹಿಜಬ್ ಧರಿಸಬಾರದು ಅಂತ ಹೈಕೋರ್ಟ್​​ ನೀಡಿರೋ ತೀರ್ಪು ವಿರುದ್ಧ ಸಲ್ಲಿಕೆಯಾಗಿರೋ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್​ ನಿರಾಕರಿಸಿದೆ. ಮಾರ್ಚ್​ 28ರಿಂದ ಪರೀಕ್ಷೆಗಳು ನಡೆಯಲಿದ್ದು, ಹಿಜಬ್ ಧರಿಸಲು ಅವಕಾಶ ನೀಡದೇ ಇದ್ರೆ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗುತ್ತೆ.. ಹೀಗಾಗಿ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಅಂತ ಅರ್ಜಿದಾರರು ಮನವಿ ಮಾಡಿದ್ರು. ಆದ್ರೆ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್​​ಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ, ಈ ವಿಚಾರವಾನ್ನು ಸೆನ್ಸೇಷನ್ ಮಾಡೋದು ಬಿಡಿ.. ಇದಕ್ಕೂ ಪರೀಕ್ಷೆಗೂ ಯಾವುದೇ ಸಂಬಂಧವೇ ಇಲ್ಲ ಅಂತ ಹೇಳಿದ್ದಾರೆ. ಅಂದಹಾಗೆ ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್​​ ಕ್ಲಾಸ್​ರೂಂಗಳಲ್ಲಿ ಹಿಜಬ್ ಧರಿಸುವಂತಿಲ್ಲ ಅನ್ನೋ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​​​​​ ಮೊರೆ ಹೋಗಲಾಗಿತ್ತು.

-masthmagaa.com

Contact Us for Advertisement

Leave a Reply