ಕಾರು ಟೋಯಿಂಗ್ ಮಾಡಿದ ಪೊಲೀಸರಿಗೆ ಮಹಿಳೆ ಅವಾಜ್!

masthmagaa.com:

ಮಹಿಳೆಯೊಬ್ಬರು ತಮ್ಮ ಕಾರನ್ನು ಟೋಯಿಂಗ್ ಮಾಡಿದ್ದಕ್ಕೆ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆಯೊಬ್ಬರು ನೋ ಪಾರ್ಕಿಂಗ್​ನಲ್ಲಿ ಕಾರು ನಿಲ್ಲಿಸಿದ್ರು. ಹೀಗಾಗಿ ಟ್ರಾಫಿಕ್ ಪೊಲೀಸರು ಅದನ್ನು ಟೋಯಿಂಗ್ ಮೂಲಕ ತೆಗೆದುಕೊಂಡು ಹೋಗೋಕೆ ಯತ್ನಿಸಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಮಹಿಳೆ ಕೂಡ ಟೋಯಿಂಗ್ ವಾಹನ ಹತ್ತಿ ಗಲಾಟೆ ಮಾಡಿದ್ದಾರೆ. ಟೋಯಿಂಗ್ ಮಾಡೋ ಮುನ್ನ ವಾಹನದ ಸಂಖ್ಯೆ ಕೂಗೋಕೆ ಆಗಿಲ್ವಾ ಅಂತ ವಾದಿಸಿದ್ದಾರೆ. ನಂಗೆ ಮೊಬೈಲ್ ಸಿಮ್ ಅಂಗಡಿಯಲ್ಲಿ ಕೆಲಸ ಇತ್ತು. ವಾಹನ ಎಲ್ಲಿ ನಿಲ್ಲಿಸಲಿ.. ಅಲ್ಲೇ ಒಂದು ಗಂಟೆ ಆಯ್ತು. ನೀವು ಫೈನನ್ನು ಅವರ ಹತ್ರಾನೇ ಕಲೆಕ್ಟ್​ ಮಾಡ್ಕೊಳ್ಳಿ ಅಂತ ಹೇಳಿದ್ದಾರೆ. ಮಹಿಳೆ ಹೇಳೋದ್ರಲ್ಲೂ ಪಾಯಿಂಟ್‌ ಇದೆ. ಸರ್ಕಾರದ ನೋಪಾರ್ಕಿಂಗ್‌ ಸ್ಪೇಸ್‌ ಅಲ್ಲಿ ವಾಹನ ನಿಲ್ಲಿಸೋ ಹಾಗಿಲ್ಲ. ಕಾನೂನೇನೋ ಚೆನ್ನಾಗಿದೆ. ಆದ್ರೆ ವಾಹನ ನಿಲ್ಲಿಸೋದು ಎಲ್ಲಿ ಅನ್ನೋದು ಪ್ರಶ್ನೆ.

-masthmagaa.com

Contact Us for Advertisement

Leave a Reply