ನನ್ನನ್ನ ಮಿಸೈಲ್‌ನಿಂದ ಹತ್ಯೆ ಮಾಡುವುದಾಗಿ ಪುಟಿನ್‌ ಬೆದರಿಕೆ ಹಾಕಿದ್ರು: ಬೋರಿಸ್‌ ಜಾನ್ಸನ್

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮೇಲೆ ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಗಂಭೀರವಾದ ಆರೋಪ ಮಾಡಿದ್ದಾರೆ. ಪುಟಿನ್‌ ಫೋನ್‌ ಕಾಲ್‌ನಲ್ಲಿ ಮಿಸೈಲ್‌ ದಾಳಿ ಮಾಡೊದಾಗಿ ಹೇಳಿದ್ರು ಅಂತ ಬೋರಿಸ್ ಹೇಳಿದ್ದಾರೆ. “BBCಯ ಪುಟಿನ್‌ ವರ್ಸಸ್‌ ದ ವೆಸ್ಟ್‌” ಅನ್ನೋ ಡಾಕ್ಯುಮೆಂಟರಿಯಲ್ಲಿ ಬೋರಿಸ್‌ ಈ ರೀತಿ ಹೇಳಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಯುಕ್ರೇನ್‌ ಯುದ್ಧಕ್ಕೂ ಮೊದಲು ಪುಟಿನ್‌ ನನಗೆ ಕಾಲ್‌ ಮಾಡಿದ್ರು. ಆಗ ನಾನು, ಯುಕ್ರೇನ್‌ ಮೇಲಿನ ಆಕ್ರಮಣ ಸಂಪೂರ್ಣ ವಿನಾಶಕ್ಕೆ ಎಡೆಮಾಡಿಕೊಡುತ್ತೆ. ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧಗಳನ್ನ ಹೇರುತ್ವೆ. ಹಾಗೂ ರಷ್ಯಾ ಗಡಿಗಳಲ್ಲಿ ನ್ಯಾಟೋ ಪಡೆಗಳು ಬಂದು ನಿಲ್ಲುತ್ತವೆ ಅಂತ ಎಚ್ಚರಿಕೆ ನೀಡಿದೆ. ಅದಕ್ಕೆ ಪುಟಿನ್‌, ಬೋರಿಸ್‌ ನಿನಗೆ ಹರ್ಟ್‌ ಮಾಡೋ ಉದ್ದೇಶ ಇಲ್ಲ, ಆದ್ರೆ ಮಿಸೈಲ್‌ನಿಂದ ಒಂದು ನಿಮಿಷ ಸಾಕು ಅಂತ ಬೆದರಿಕೆ ಹಾಕಿದ್ರು. ಅಂದ್ರೆ ಮಿಸೈಲ್‌ ಇಟ್ಟು ಉಡಾಯಿಸಿದ್ರೆ, 1 ನಿಮಿಷ ಸಾಕು ನಿಮ್ನ ಮುಗಿಸೋಕೆ ಅನ್ನೋ ಅರ್ಥದಲ್ಲಿ ಪುಟಿನ್‌ ಮತಾಡಿದ್ರು ಅಂತ ಬೋರಿಸ್‌ ಹೇಳಿದ್ದಾರೆ. ಆದ್ರೆ ಅವ್ರ ಟೋನ್‌ ನೋಡಿದ್ರೆ ಅಂತ ಸೀರಿಯಸ್‌ ಆಗಿ ಏನು ಹೇಳಿಲ್ಲ ಅನ್ಸುತ್ತೆ. ನಾನು ಯುದ್ಧ ಮಾಡ್ಬೇಡಿ ಅಂತ ಹೇಳ್ತಿದ್ದಕ್ಕೆ ಆ ರೀತಿ ರಿಯಾಕ್ಟ್‌ ಮಾಡಿರ್ಬಹುದು ಅಂತ ಬೋರಿಸ್‌ ಜಾನ್ಸನ್‌ ಹೇಳಿದ್ದಾರೆ. ಜೊತೆಗೆ ಯುಕ್ರೇನ್‌ ಏನು ಹೋಗಿ ಅಷ್ಟ್‌ಬೇಗ ನ್ಯಾಟೋ ಸೇರಲ್ಲ ಅಂತ ಕೂಡ ಹೇಳಿದ್ದೆ ಅಂತ ಬೋರಿಸ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply