ಪ್ರಶಾಂತ್ ನೀಲ್ ಸದ್ಯ ಕನ್ನಡ ಸಿನಿಮಾ ಮಾಡೋದು ಡೌಟು?!

masthmagaa.com:

2014 ರಲ್ಲಿ ತೆರೆಕಂಡ ಶ್ರೀಮುರುಳಿ ಅಭಿನಯದ `ಉಗ್ರಂ’ ಚಿತ್ರದ ಮೂಲಕ ಡೈರೆಕ್ಟರ್‌ ಆಗಿ ಸಂಚಲನ ಸೃಷ್ಠಿ ಮಾಡಿದ ಪ್ರಶಾಂತ್‌ ನೀಲ್‌ ನಂತರ ಯಶ್‌ ಅಭಿನಯದ ಕೆಜಿಎಫ್‌ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹಿಸ್ಟರಿಯನ್ನೇ ಕ್ರೀಯೆಟ್‌ ಮಾಡಿಬಿಟ್ಟರು. ಕೆಜಿಎಫ್‌ ಚಿತ್ರ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳ್‌, ತೆಲುಗು ಭಾಷೆಗಳಲ್ಲೂ ಸಂಚಲನ ಸೃಷ್ಟಿಸಿತ್ತು. ಡಿಸೆಂಬರ್ 21 ರಂದು 2018ರಲ್ಲಿ ಕೆಜಿಎಫ್ ಪಾರ್ಟ್‌1 ಸಿನಿಮಾ ತೆರೆಕಂಡಿತ್ತು. ಪ್ರತಾಂತ್ ನೀಲ್ ನಿರ್ದೇಶನದ ಈ ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರ ಹೊಮ್ಮಿತು. KGF ಚಾಪ್ಟರ್‌ 1 ಸಿನಿಮಾ ವಿಶ್ವಾದ್ಯಂತ ರೂ. ಒಟ್ಟು 250 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನೂ 2022ರಲ್ಲಿ ಬಿಡುಗಡೆಯಾದ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1250 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿತ್ತು. ಇಲ್ಲಿಂದ ಪ್ರಶಾಂತ್‌ ಅವರ ಲಕ್‌ ಚೇಂಜ್‌ ಆಗಿ ಹೋಯ್ತು.

ಇಷ್ಟೆಲ್ಲಾ ಸಾಧನೆ ಮಾಡಿ ಇಡೀ ದೇಶವೇ ಸ್ಯಾಂಡಲ್‌ವುಡ್‌ ಕಡೆ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್‌ ನೀಲ್‌ ಈಗ ತೆಲುಗಿನ ಸಲಾರ್ ಮೂವಿಯಲ್ಲಿ ಬ್ಯೂಸಿ ಇದ್ದಾರೆ. ‘ಸಲಾರ್’ ಸಿನಿಮಾದ ಚಿತ್ರೀಕರಣ ಕೂಡ ಮುಗಿದಿದ್ದು ರಿಲೀಸ್‌ ಆಗೋ ಹಂತದಲ್ಲಿದೆ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ‘ಸಲಾರ್‌’ ಸಿನಿಮಾ ತಯಾರಾಗುತ್ತಿದ್ದು, ಹೊಂಬಾಳೆ ಫಿಲ್ಮ್ಸ್ಈ ಸಿನಿಮಾವನ್ನ ಪ್ರೋಡ್ಯೂಸ್‌ ಮಾಡ್ತಿದೆ.

ಇದರ ನಂತರ ತೆಲುಗಿನ NTR 31 ಮೆಗಾ ಪ್ರಾಜೆಕ್ಟ್​ಗೂ ಕೂಡ ಪ್ರಶಾಂತ್‌ ಅವರೇ ಆಕ್ಷನ್‌ ಕಟ್‌ ಹೇಳಲಿದ್ದಾರೆ. NTR 31 ಚಿತ್ರ ಜ್ಯೂ. ಎನ್‌ಟಿಆರ್‌ ಮತ್ತು ಪ್ರಶಾಂತ್‌ ನೀಲ್‌ ಅವರ ಕೈಚಳಕದಲ್ಲಿ ಮೂಡಿಬರಲಿದೆ. ಇದಾದ ಮೇಲೆ ಮತ್ತೆ ಪ್ರಭಾಸ್‌ ಅಭಿನಯದ ಪೌರಾಣಿಕ ಚಿತ್ರಕ್ಕೂ ಕೂಡ ಪ್ರಶಾಂತ್‌ ಅವರೇ ಡೈರೆಕ್ಟರ್‌ ಅನ್ನೋ ಸುದ್ದಿ ಹೊರಬಿದ್ದಿದೆ. ಸೋ ತೆಲುಗಿನಲ್ಲಿ ಎರಡು ಪ್ರಾಜೆಕ್ಟ್ ಮುಗಿಸಿ ನೀಲ್ ಕನ್ನಡಕ್ಕೆ ವಾಪಸ್‌ ಬರ್ತಾರೆ ಎಂದು ನಿರೀಕ್ಷಿಸುತ್ತಿದ್ದ ಕನ್ನಡಿಗರಿಗೆ ನಿರಾಸೆ ಆಗಿದೆ. ಪ್ರಶಾಂತ್ ನೀಲ್ ಅವರು ಸಲಾರ್ ಮುಗಿಸಿ, ನಂತರ ಜೂನಿಯರ್ ಎನ್​ಟಿಆರ್ ಸಿನಿಮಾ ಮುಗಿಸಿ ನಂತರ ಮತ್ತೆ ಪ್ರಭಾಸ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಅಲ್ಲಿಗೆ ತೆಲುಗಿನಲ್ಲಿ ಭರ್ಜರಿ 3 ಪ್ರಾಜೆಕ್ಟ್​ನಲ್ಲಿ ಕೆಜಿಎಫ್ ಡೈರೆಕ್ಟರ್ ಬ್ಯುಸಿಯಾಗಲಿದ್ದಾರೆ. ಈ ವಿಚಾರ ಬರೀ ಗಾಸಿಪ್ ಅಲ್ಲ. ಬದಲಾಗಿ ನಿರ್ಮಾಪಕ ದಿಲ್​ರಾಜು ಅವರೇ ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಪಕ ವಿಜಯ್ ಕಿರಗಂದೂರು ಅವರು 2025ರಲ್ಲಿ ಕೆಜಿಎಫ್ 3 ಸೆಟ್ಟೇರುತ್ತೆ. 2026ಕ್ಕೆ ರಿಲೀಸ್ ಆಗುತ್ತೆ ಎಂದು ಹೇಳಿದ್ದರು.ಸಲಾರ್ ಸಿನಿಮಾದ ನಂತರ ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್​ಟಿಆರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದು ಆ ಎರಡು ಪ್ರಾಜೆಕ್ಟ್ ಮುಗಿಸಿ ಕನ್ನಡಕ್ಕೆ ವಾಪಸ್‌ ಬರುತ್ತಾರೆ ಎಂದು ಹೇಳಿದ್ದರು.ಆದರೆ ಈಗ ದಿಲ್​ರಾಜು ಕೊಟ್ಟಿರೋ ಹೇಳಿಕೆ ಎಲ್ಲಾ ಲೆಕ್ಕಾಚಾರವನ್ನೂ ತಲೆಗೆಳಗಾಗಿಸಿದೆ. ಕೆಜಿಎಫ್ 3 ಇರಲಿ ಪ್ರಶಾಂತ್‌ ನೀಲ್‌ ಇನ್ನೂ ಒಂದ್‌ 5 ವರ್ಷ ಕನ್ನಡಕ್ಕೆ ವಾಪಸ್‌ ಬಂದು ನಿರ್ದೇಶನ ಮಾಡೋದೆ ಡೌಟ್‌ ಆಗಿದೆ. ಪ್ರಶಾಂತ್ ನೀಲ್ ಬ್ಯಾಕ್ ಟು ಬ್ಯಾಕ್ 3 ಪ್ರಾಜೆಕ್ಟ್ ತೆಲುಗಿನಲ್ಲಿಯೇ ಮಾಡುತ್ತಿರುವುದು ಕನ್ನಡ ಸಿನಿಪ್ರಿಯರಿಗೆ ಸ್ವಲ್ಪ ಬೇಸರ ತಂದಿದೆ. ಆದರೆ ವಿಜಯ್ ಕಿರಗಂದೂರು ಅವರು ಇತ್ತೀಚೆಗೆ ಕೊಟ್ಟ ಕೆಜಿಎಫ್ 3 ಹೇಳಿಕೆಗೆ ದಿಲ್​ರಾಜು ಬೇಕೆಂದೇ ಈ ಥರ ಹೇಳಿಕೆ ಕೊಟ್ಟಿದ್ದಾರಾ ಎನ್ನುವುದು ನೆಟ್ಟಿಗರ ಚರ್ಚೆ. ಡೈರೆಕ್ಟ್‌ರ್‌ ನೋಡಿದ್ರೆ ತೆಲುಗಿನಲ್ಲೇ ಬ್ಯೂಸಿ ಇದಾರೆ. ಮತ್ತೆ ವಾಪಾಸ್‌ ಕನ್ನಡಕ್ಕೆ ಬರೋದು ಯಾವಾಗ ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿದೆ. ಪ್ರಶಾಂತ್‌ ಅವರ ಡೈರೆಕ್ಷನ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ರೆಡಿಯಾಗ್ತಾ ಇದೆ. ಆದರೆ ಕನ್ನಡದಲ್ಲಿ ಮಾತ್ರ ಒಂದೂ ಸಿನಿಮಾ ಇಲ್ಲ ಅನ್ನೋದು ಅಭಿಮಾನಿಗಳಿಗೆ ಬೇಸರ ತಂದಿದೆ.

-masthmagaa.com

Contact Us for Advertisement

Leave a Reply