ಯುಕ್ರೇನ್​​ನಲ್ಲಿ ಸ್ಕೂಲ್ ಮೇಲೆ ದಾಳಿ ಮಾಡಿದ ರಷ್ಯಾ!

masthmagaa.com:

ಯುಕ್ರೇನ್​ನ ದಕ್ಷಿಣ ಭಾಗದಲ್ಲಿ ಬರೋ ಮೈಕೋಲೈವ್​ ನಗರದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಯುಕ್ರೇನ್​​ನ 40ಕ್ಕೂ ಹೆಚ್ಚು ಯೋಧರು ಪ್ರಾಣ ಕಳ್ಕೊಂಡಿದ್ದಾರೆ ಅಂತ ವರದಿಯಾಗಿದೆ. ಯುಕ್ರೇನ್​ ಸೇನೆಯ ಹಿರಿಯ ಅಧಿಕಾರಿಯೊಬ್ಬರ ಈ ಮಾಹಿತಿ ನೀಡಿದ್ದಾರೆ ಅಂತ ನ್ಯೂಯಾರ್ಕ್​ ಟೈಮ್ಸ್ ವರದಿ ಮಾಡಿದೆ. ಮೈಕೋಲೈವ್​ನಲ್ಲಿರೋ ಯುಕ್ರೇನ್​ನ 36ನೇ ನಾವಲ್ ಇನ್​ಫ್ಯಾಂಟ್ರಿ ಬ್ರಿಗೇಡ್​​ನ ಕೇಂದ್ರ ಕಚೇರಿ ಮೇಲೆ ಲಾಂಗ್​ ರೇಂಜ್​ ಮಿಸೈಲ್​ ಬಂದು ಅಪ್ಪಳಿಸಿರೋ ಸಾಧ್ಯತೆ ಇದೆ ಅಂತ ಅಧಿಕಾರಿ ತಿಳಿಸಿದ್ದಾರೆ. ರಷ್ಯಾ-ಯುಕ್ರೇನ್​ ಯುದ್ಧದಲ್ಲಿ ಸಾವಿರಾರು ರಷ್ಯಾ ಯೋಧರು ಪ್ರಾಣ ಕಳ್ಕೊಂಡಿದ್ದಾರೆ ಅಂತ ಲೆಕ್ಕ ಕೊಡ್ತಿರೋ ಯುಕ್ರೇನ್​ ತನ್ನ ಯೋಧರ ಸಾವಿನ ಲೆಕ್ಕ ಕೊಡ್ತಿರಲಿಲ್ಲ. ಇದೇ ಮೊದಲ ಬಾರಿಗೆ ಅಧಿಕಾರಿಯೊಬ್ಬರು ಮೈಕೋಲೈವ್​​​ನಲ್ಲಿ ಮೃತಪಟ್ಟ ಯೋಧರ ಸಂಖ್ಯೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply