ವಿಶ್ವಕ್ಕೆ ಕೊರೋನಾ ಚಿಂತೆ.. ಉತ್ತರ ಕೊರಿಯಾದಲ್ಲಿ ಕ್ಷಿಪಣಿ ಪರೀಕ್ಷೆ

masthmagaa.com:

ಇಡೀ ವಿಶ್ವಕ್ಕೆ ಕೊರೋನಾ ಚಿಂತೆಯಾದ್ರೆ ಉತ್ತರ ಕೊರಿಯಾಗೆ ಬೇರೆಯದ್ದೇ ಚಿಂತೆ. ಯಾಕಂದ್ರೆ ಎಲ್ಲಾ ದೇಶಗಳು ಮಾರಣಾಂತಿಕ ಕಾಯಿಲೆಯಿಂದ ತಪ್ಪಿಸಿಕೊಳ್ಳೋದು ಹೇಗೆ, ಕಾಯಿಲೆ ಹರಡದಂತೆ ತಡೆಯೋದು ಹೇಗೆ ಅಂತ ತಲೆ ಕೆಡಿಸಿಕೊಂಡಿವೆ. ಆದ್ರೆ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಮಾತ್ರ​ ಕ್ಷಿಪಣಿ ಪರೀಕ್ಷೆ ನಡೆಸಿ ಮತ್ತೆ ಸುದ್ದಿಯಲ್ಲಿದ್ದಾರೆ.

ಭಾನುವಾರ ಉತ್ತರ ಕೊರಿಯಾದಲ್ಲಿ ‘ಸೂಪರ್-ಲಾರ್ಜ್​ ಮಲ್ಟಿಪಲ್ ರಾಕೆಟ್​ ಲಾಂಚರ್​’ಗಳ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನೆರೆಯ ದಕ್ಷಿಣ ಕೊರಿಯಾ ಇಂತಹ ಸಂದರ್ಭದಲ್ಲಿ ಉತ್ತರ ಕೊರಿಯಾದ ಈ ನಡೆ ಸರಿಯಲ್ಲ ಎಂದಿದೆ.

ಉತ್ತರ ಕೊರಿಯಾದಲ್ಲಿ ಯಾವುದೇ ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಸುದ್ಧಿ ಸಂಸ್ಥೆ ಇಲ್ಲ. ಸರ್ಕಾರಿ ಮಾಧ್ಯಮಗಳು ನೀಡುವ ಮಾಹಿತಿಯೇ ಅಂತಿಮ. ಸರ್ಕಾರ ಹೇಳಿದ ಅಂಕಿ ಅಂಶಗಳನ್ನು ಮಾತ್ರ ಇದು ಪ್ರಸಾರ ಮಾಡುತ್ತೆ. ಹೀಗಾಗಿ ಉತ್ತರ ಕೊರಿಯಾದಲ್ಲಿ ಇದುವರೆಗೆ ಯಾವುದೇ ಕೊರೋನಾ ಕೇಸ್​ ಬಗ್ಗೆ ವರದಿಯಾಗಿಲ್ಲ. ಅಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ವೋ ಅಥವಾ ಸರ್ಕಾರವೇ ಅಂಕಿ ಅಂಶಗಳನ್ನ ಮುಚ್ಚಿಡುತ್ತಿದೆಯೋ ಗೊತ್ತಿಲ್ಲ.

-masthmagaa.com

Contact Us for Advertisement

Leave a Reply