ಶೂಟಿಂಗ್‌ ಸೆಟ್‌ನಲ್ಲಿ ಮಾದಕ ವ್ಯಸನ ಬಳಕೆ : ಮಲಯಾಳಂನ ಇಬ್ಬರು ಟಾಪ್‌ ನಟರು ಬ್ಯಾನ್‌!

masthmagaa.com:

ಇಬ್ಬರು ಟಾಪ್‌ ನಟರನ್ನ ಮಲಯಾಳಂ ಚಿತ್ರಂಗದಿಂದ ಬ್ಯಾನ್‌ ಮಾಡಲಾಗಿದೆ. ಮಲಯಾಳಂ ಚಿತ್ರರಂಗವು ಇಬ್ಬರು ಜನಪ್ರಿಯ ನಾಯಕ ನಟರಾದ ಶ್ರೀನಾಥ್ ಭಾಸಿ ಮತ್ತು ಶೇನ್ ನಿಗಮ್ ಅವರನ್ನು ಚಿತ್ರರಂಗದಿಂದ ನಿಷೇಧಿಸಿದೆ. ಶೂಟಿಂಗ್ ಸೆಟ್ ನಲ್ಲಿ ಅಶಿಸ್ತು ತೋರಿದ ಕಾರಣಕ್ಕೆ ಈ ಇಬ್ಬರನ್ನ ಬ್ಯಾನ್‌ ಮಾಡಲಾಗಿದೆ. . ಕೇರಳದ ಚಲನಚಿತ್ರ ನೌಕರರ ಸಂಘ ಮತ್ತು ಕೇರಳ ಸಿನಿಮಾ ನಿರ್ಮಾಪಕರ ಸಂಘ ಒಟ್ಟಾಗಿ ಈ ನಿರ್ಧಾರ ಕೈಗೊಂಡಿದೆ. ಮಲಯಾಳಂನ ಜನಪ್ರಿಯ ಚಿತ್ರ ಕುಂಬಳಂಗಿ ನೈಟ್ಸ್‌ನಲ್ಲಿ ಶ್ರೀನಾಥ್ ಬಾಸಿ ಮತ್ತು ಶೇನ್ ನಿಗಮ್ ಒಟ್ಟಿಗೆ ನಟಿಸಿದ್ದಾರೆ. ಇದಲ್ಲದೇ ಇನ್ನೂ ಹಲವು ಸಿನಿಮಾಗಳಲ್ಲಿ ಇಬ್ಬರೂ ನಟಿಸಿದ್ದಾರೆ.

ಕೇರಳದ ಚಲನಚಿತ್ರ ನೌಕರರ ಸಂಘ, ಕೇರಳ ಚಲನಚಿತ್ರ ನಿರ್ಮಾಪಕರ ಸಂಘ ಮತ್ತು ಒಕ್ಕುರಲ್‌ನ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ಈ ಇಬ್ಬರು ನಟರ ವಿರುದ್ಧ ಬಂದಂತ ದೂರುಗಳನ್ನ ಪರಿಶೀಲಿಸಿ ಈ ಇಬ್ಬರು ನಟರನ್ನು ಬ್ಯಾನ್‌ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಈ ಸಂಘಟನೆಗಳು ಈ ನಟರನ್ನು ಯಾವುದೇ ಸಿನಿಮಾದಲ್ಲಿ ನಟಿಸದಿರಲು ಮತ್ತು ಈ ಇಬ್ಬರನ್ನ ಯಾವುದೇ ಸಿನಿಮಾಗೆ ತಗೋಳ್ಬಾರ್ದು ಅಂತ ಆದೇಶ ಹೊರಡಿಸಿದೆ.

ಕೇರಳ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ ರಂಜಿತ್ ಆರೋಪಿಸಿದಂತೆ, “ಈ ಇಬ್ಬರು ನಟರು ಚಿತ್ರದ ಸೆಟ್‌ನಲ್ಲಿ ಯಾವಾಗಲೂ ಮಾದಕ ವ್ಯಸನದಲ್ಲಿ ತೊಡಗಿರ್ತಿದ್ರು. ಇದರಿಂದ ಚಿತ್ರದ ನಿರ್ಮಾಪಕರು, ಸೆಟ್‌ನಲ್ಲಿರುವ ಇತರೆ ತಂತ್ರಜ್ಞರು ಹಾಗೂ ಸಹ ನಟರಿಗೆ ಸಮಸ್ಯೆಯಾಗ್ತಿತ್ತು, ಚಿತ್ರೀಕರಣವೂ ಕೂಡ ಕಷ್ಟವಾಗ್ತಿತ್ತು. ಇವರಿಬ್ಬರ ಮೇಲೆ ಆಗಾಗ ದೂರುಗಳು ಬರುತ್ತಿದ್ದವು” ಎಂದು ರಂಜಿತ್ ಹೇಳಿದ್ದಾರೆ.

ಕೆಲವು ವಾರಗಳ ಹಿಂದೆ, ನಟ ಶೇನ್ ನಿಗಮ್ ಆರ್‌ಡಿಎಕ್ಸ್ ಹೆಸರಿನ ಚಿತ್ರದಿಂದ ಹೊರನಡೆದಿದ್ದರು. ಚಿತ್ರದಲ್ಲಿ ಶೇನ್ ನಿಗಮ್ ಜೊತೆಗೆ ಲಾಲ್ ಮತ್ತು ಆಂಟೋನಿ ವರ್ಗೀಸ್ ಅವರಂತಹ ದೊಡ್ಡ ನಟರೂ ಇದ್ದರು. 90 ರಷ್ಟು ಚಿತ್ರೀಕರಣ ಮುಗಿದಿತ್ತು, ನಟ ಶೇನ್ ನಿಗಮ್ ಸೆಟ್‌ನಿಂದ ಹೊರನಡೆದಿದ್ದಾರೆ. ಇದರಿಂದ ನಿರ್ಮಾಪಕರು ಹಾಗೂ ಇತರೆ ನಟರು ತೀವ್ರ ಬೇಸರಗೊಂಡಿದ್ದರು.

ಕೆಲವು ನಿರ್ಮಾಪಕರು ಶ್ರೀನಾಥ್ ಬಸಿ ಅವರ ಮೇಲೆ ಆರೋಪ ಮಾಡಿದ್ದಾರೆ ಮತ್ತು ಉದ್ದೇಶಪೂರ್ವಕವಾಗಿ ಬೇರೆ ಬೇರೆ ನಿರ್ಮಾಪಕರಿಗೆ ಒಂದೇ ದಿನಾಂಕಗಳನ್ನು ನೀಡುವ ಮೂಲಕ ಶ್ರೀನಾಥ್ ಬಸಿ ತೊಂದರೆ ಕೊಡ್ತಿದ್ರು ಅಂತ ಆರೋಪ ಮಾಡಿದ್ದಾರೆ.

ಶೇನ್ ನಿಗಮ್, ಇಷ್ಕ್, ಈಡಾ, ಕೇರ್ ಆಫ್ ಸೈರಾ ಬಾನು, ಕಮ್ಮಟಿಪದಂ, ವಲಿಯಪೆರುನ್ನಾಳ್, ಕರೋನಾ ಪೇಪರ್ಸ್ ಚಿತ್ರಗಳಲ್ಲಿ ಶೇನ್ ನಿಗಮ್ ನಟಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ಆರು ಸಿನಿಮಾಗಳಿವೆ. ಶ್ರೀನಾಥ್ ಬಸಿ ವೈರಸ್, ಟ್ರಾನ್ಸ್, ಕಪ್ಪೆಲ, ಹೋಮ್, ಭೀಷ್ಮ ಪರ್ವಂ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಆರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply