ದುಬೈನಲ್ಲಿ ನಡೆಯಲಿದೆ ಈ ವರ್ಷದ ಮಿಸ್ ಯೂನಿವರ್ಸ್!

masthmagaa.com:

ಯುಎಇಯ ದುಬೈನಲ್ಲಿ ಇದೇ ಮೊದಲ ಬಾರಿಗೆ ಸೌಂದರ್ಯ ಲೋಕದ ಅತಿದೊಡ್ಡ ಸ್ಪರ್ಧೆ ಮಿಸ್ ಯೂನಿವರ್ಸ್​ ಯುಎಸ್ ಆಯೋಜಿಸಲು ನಿರ್ಧರಿಸಲಾಗಿದೆ. ಮಿಸ್​ ಯುನಿವರ್ಸ್​ ಆರ್ಗನೈಸೇಷನಲ್ & ಯೂಗೇನ್ ಈವೆಂಟ್​​ ಬುರ್ಖ್​ ಖಲೀಫಾದ ಅರ್ಮಾನಿ ರೆಸ್ಟೋರೆಂಟ್​ನಲ್ಲಿ ಈ ಬಗ್ಗೆ ಘೋಷಿಸಿದೆ. ಇದ್ರ ಅಧಿಕೃತ ವೆಬ್​ಸೈಟ್​​​ಗೆ ಹೋಗಿ ಈ ಸ್ಪರ್ಧೆಯಲ್ಲಿ ಭಾಗಿಯಾಗಲು ರಿಜಿಸ್ಟರ್ ಮಾಡಬಹುದಾಗಿದೆ. 18ರಿಂದ 20 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 20ರಂದು ಅರ್ಜಿದಾರರ ಪೈಕಿ 30 ಮಂದಿಯನ್ನು ಸ್ಪರ್ಧೆಗೆ ಸೆಲೆಕ್ಟ್​ ಮಾಡಲಾಗುತ್ತೆ. ಇದ್ರಲ್ಲಿ ಗೆದ್ದವರಿಗೆ 70ನೇ ಮಿಸ್ ಯುನಿವರ್ಸ್ ಕಿರೀಟ ಸಿಗಲಿದೆ. ಈ ಸ್ಪರ್ಧೆ ದುಬೈನಲ್ಲಿ ನಡೆದ್ರೂ, ಪ್ರಶಸ್ತಿ ಪ್ರಧಾನ ಸಮಾರಂಭ ಡಿಸೆಂಬರ್​ ತಿಂಗಳಲ್ಲಿ ಇಸ್ರೇಲ್​ನಲ್ಲಿ ನಡೆಯಲಿದೆ. ಅಂದಹಾಗೆ ಈ ಮಿಸ್ ಯುನಿವರ್ಸ್ ಸ್ಪರ್ಧೆ 1952ರಲ್ಲಿ ಶುರುವಾಗಿತ್ತು.

-masthmagaa.com

Contact Us for Advertisement

Leave a Reply