ಸೈಕಿ ನೌಕೆ: 1.6 ಕೋಟಿ ಕಿ.ಮೀ ಅಂತರದಿಂದ ಲೇಸರ್‌ ಬೀಮ್‌ ಮೆಸೇಜ್‌ ರವಾನೆ

masthmagaa.com:

ಸೈಕಿ ಕ್ಷುದ್ರಗ್ರಹದ ಅಧ್ಯಯನಕ್ಕಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಲಾಂಚ್‌ ಮಾಡಿದ್ದ ʻಸೈಕಿʼ ಬಾಹ್ಯಾಕಾಶ ನೌಕೆ ದಾಖಲೆ ಮಟ್ಟದ ಅಂತರದಿಂದ ಯಶಸ್ವಿಯಾಗಿ ಭೂಮಿಗೆ ಮೆಸೇಜ್‌ ಕಳಿಸಿದೆ. ʻಸೈಕಿʼ ಸ್ಪೇಸ್‌ಕ್ರಾಫ್ಟ್‌ನ ಭಾಗವಾಗಿರೋ Deep Space Optical Communications (DSOC) ಸುಮಾರು 1.6 ಕೋಟಿ ಕಿಲೋಮೀಟರ್‌ ದೂರದಿಂದ ಲೇಸರ್‌ ಬೀಮ್‌ ಮೇಸಜ್‌ ಒಂದನ್ನ ಕಳಿಸಿದೆ. ಅಂದ್ರೆ ಚಂದ್ರ ಮತ್ತು ಭೂಮಿಯ ನಡುವೆ ಎಷ್ಟು ಅಂತರ ಇದ್ಯಲ್ಲಾ ಅದಕ್ಕಿಂತ 40 ಪಟ್ಟು ಹೆಚ್ಚು ದೂರದಲ್ಲಿರುವ ಪರೀಕ್ಷಾ ಡೇಟಾದ ಜೊತೆ ಎನ್‌ಕೋಡ್‌ ಮಾಡಲಾದ ಇನ್‌ಫ್ರಾರೆಡ್‌ ಲೇಸರ್ ಅನ್ನು ಬೀಮ್ ಮಾಡುವ ಮೂಲಕ ಈ ಸಾಧನೆ ಮಾಡಿದೆ. ಈ ಸಿಗ್ನಲ್‌ನ್ನ ಕ್ಯಾಲಿಫೋರ್ನಿಯಾದ ಕ್ಯಾಲ್ಟೆಕ್‌ನ ಪಾಲೋಮರ್ ವೀಕ್ಷಣಾಲಯದಲ್ಲಿರುವ ಹೇಲ್ ಟೆಲಿಸ್ಕೋಪ್‌ನಿಂದ ರಿಸೀವ್‌ ಮಾಡಿಕೊಳ್ಳಲಾಗಿದೆ. ಅಂದ್ಹಾಗೆ ಇದ್ರಿಂದ ಸ್ಪೇಸ್‌ನಿಂದ ಡೇಟಾಗಳನ್ನ ವೇಗವಾಗಿ ಪಡಿಬೋದು ಹಾಗೂ ಮಿಷನ್‌ಗಳಿಗೆ ಬೇಕಾದ ಕಮಾಂಡ್‌ನ್ನ ಫಾಸ್ಟ್‌ ಆಗಿ ತಲುಪಿಸೋಕೆ ಹೆಲ್ಪ್‌ ಆಗಲಿದೆ.

-masthmagaa.com

Contact Us for Advertisement

Leave a Reply