ಚಂದ್ರನಿಂದ ಭೂಮಿ ಹೇಗೆ ಕಾಣುತ್ತೆ ಗೊತ್ತಾ..?

ಚಿಕ್ಕವಯಸ್ಸಿಂದಾನೂ ನಾವೆಲ್ಲ ಚಂದ್ರನನ್ನು ನೋಡುತ್ತಾ ಬಂದಿದ್ದೇವೆ. ಮಕ್ಕಳಿಗೆ ಚಂದ್ರನನ್ನು ತೋರಿಸಿ ಚಂದಮಾಮ ಕಥೆ ಹೇಳಿದ್ದೇವೆ. ಆದರೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ. ಚಂದ್ರನ ಮೇಲೆ ನಿಂತು ನೋಡಿದಾಗ ನಮ್ಮ ತಾಯಿ, ಈ ಭೂಮಿ ಭೂಮಿ ಹೇಗೆ ಕಾಣುತ್ತಾಳೆ ಅಂತ.! ಫ್ರೆಂಡ್ಸ್ ಮೊದಲೇ ಹೇಳಿಬಿಡುತ್ತೇವೆ. ಇದೊಂದು ಅತ್ಯಂತ ರೋಮಾಂಚಕ ಅನುಭವ. ಇದುವರೆಗೂ ಬಾಹ್ಯಾಕಾಶದಿಂದ ಚಂದ್ರ ಮತ್ತು ಭೂಮಿಯನ್ನು ಸೇರಿಸಿ ಹಲವಾರು ಫೋಟೋಗಳನ್ನು ತೆಗೆಯಲಾಗಿದೆ, ಚಂದ್ರನ ಮೇಲಿನಿಂದಲೂ ಭೂಮಿಯ ಹತ್ತಾರು ಒರಿಜಿನಲ್ ಫೋಟೋಗಳನ್ನ ತೆಗೆಯಲಾಗಿದೆ.

ಚಂದ್ರ ಭೂಮಿಯ ಉಪಗ್ರಹ. ಭೂಮಿ ಮೇಲಿಂದ ಚಂದ್ರ ಒಂದು ಸಣ್ಣ ಚೆಂಡಿನಂತೆ ಕಾಣುತ್ತದೆ. ಆದರೆ ಚಂದ್ರನ ಮೇಲೆ ನಿಂತು ನೋಡಿದಾಗ, ಭೂಮಿ ಚಂದ್ರನಿಗಿಂತ ನಾಲ್ಕು ಪಟ್ಟು ದೊಡ್ಡದಾಗಿ ಕಾಣುತ್ತದೆ. ನಮ್ಮ-ನಿಮ್ಮ ಭೂಮಿತಾಯಿ ಅತ್ಯಂತ ಸೌಂದರ್ಯದಿಂದ ಕಂಗೊಳಿಸುತ್ತಾಳೆ.

50 ವರ್ಷಗಳ ಹಿಂದೆ ಮೊದಲ ಬಾರಿಗೆ ಮಾನವ ಚಂದ್ರನ ಮೇಲೆ ಕಾಲಿಟ್ಟಾಗ, ಚಂದ್ರನ ಮೇಲಿನಿಂದ ಭೂಮಿಯ ಹಲವಾರು ಫೋಟೋಗಳನ್ನು ತೆಗೆಯಲಾಗಿದೆ. ಅಪೋಲೋ ಹನ್ನೊಂದರ ಗಗನಯಾತ್ರಿ 1969ರಲ್ಲಿ ಚಂದ್ರನತ್ತ ಹೋದಾಗ, ಚಂದ್ರನ ಮೇಲೆ ಲ್ಯಾಂಡ್ ಆಗುವ ಸ್ವಲ್ಪ ಮೊದಲು ತೆಗೆದ ಭೂಮಿಯ ಈ ಫೋಟೊವನ್ನು ನೋಡಿ.. ಇಡೀ ಪ್ರಪಂಚ ಆಗ ಹುಚ್ಚೆದ್ದು ಕ್ರೇಝಿ ಆಗಿತ್ತು. ಈ ಫೋಟೋಗ್ರಾಫ್ ನಲ್ಲಿ ಚಂದ್ರನ ಅಂಚಿನಿಂದ ಭೂಮಿಯ ಉದಯ ಆಗುವುದು ಸೆರೆಯಾಗಿತ್ತು!

ಅದಾದ ಬಳಿಕ ನಡೆದ ಹಲವಾರು ಚಂದ್ರಯಾನ ಗಳಲ್ಲಿ ಭೂಮಿಯ ರಮಣೀಯ ಚಿತ್ರಗಳನ್ನ ಸೆರೆಹಿಡಿಯಲಾಗಿದೆ. ಕೆಲವನ್ನು ಚಂದ್ರನ ಮೇಲಿನಿಂದ. ಇನ್ನು ಕೆಲವನ್ನು ಚಂದ್ರನಿಗಿಂತಲೂ ದೂರದಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಮೂಲಕ ತೆಗೆಯಲಾಗಿದೆ. ಬಾಹ್ಯಾಕಾಶದಿಂದ ತೆಗೆದ ಕೆಲವೊಂದು ಫೋಟೋಗಳಲ್ಲಂತೂ ಚಂದ್ರ ಮತ್ತು ಭೂಮಿಯನ್ನು ಒಟ್ಟಿಗೆ ನೋಡಬಹುದಾಗಿದೆ. ಚಂದ್ರ ಸಣ್ಣ ಮಣ್ಣಿನ ಉಂಡೆಯಂತೆ ಕಂಡರೆ, ನಮ್ಮ-ನಿಮ್ಮೆಲ್ಲರ ಭೂಮಿತಾಯಿಯ ವಿಶಾಲ, ಸಮೃದ್ಧ, ಜೀವಕಳೆಯಿಂದ ತುಂಬಿದ ಕೋಟ್ಯಂತರ ಜೀವರಾಶಿಗಳ ಮನೆಯಾಗಿ ಕಾಣುತ್ತದೆ. ಚಂದ್ರನ ಮೇಲಿನಿಂದ ಭೂಮಿಯ ಜಲರಾಶಿ ಗಾಢ ನೀಲಿ ಬಣ್ಣದಲ್ಲಿ ಕಾಣುತ್ತದೆ. ಭೂಮಿಯ ಮೇಲಿನ ಹಸಿರು ಕೂಡ ಚಂದ್ರನಿಂದ ಸ್ಪಷ್ಟವಾಗಿ ಕಾಣುತ್ತದೆ. ಮರುಭೂಮಿ ಕೂಡ ಕಾಣುತ್ತದೆ. ಭೂಮಿಯ ಮೇಲಿನ ಮೋಡದಂತಹ ವಾತಾವರಣ ಕೂಡ ಕಾಣಿಸುತ್ತದೆ.

ಇದನ್ನೆಲ್ಲ ನೋಡಿದಾಗ ಒಂದು ಯೋಚನೆ ಬರುತ್ತದೆ. ಭೂಮಿ ಮೇಲೆ ನಾವು ನಾಯಿಗಳಂತೆ ಕಿತ್ತಾಡುತ್ತೇವೆ. ಜಾತಿ, ಧರ್ಮ, ಕುಲ, ಊರು, ಗಲ್ಲಿ, ರಾಜ್ಯ, ದೇಶ, ಜನಾಂಗ, ಅಂತ ನಾನಾ ಬೌಂಡರಿಗಳನ್ನು ಹಾಕಿಕೊಂಡು ಒಬ್ಬರನ್ನು ಕಂಡರೆ ಮತ್ತೊಬ್ಬರು ಅಸಹ್ಯ ಪಟ್ಟುಕೊಂಡು ಸಿಲ್ಲಿಯಾಗಿ ಬದುಕುತ್ತಿದ್ದೇವೆ. ಒಂದು ಸಲ ಯೋಚನೆ ಮಾಡಿ. ಭೂಮಿ ಮೇಲಿನ ಅಷ್ಟು ದೇಶ ಮತ್ತು ಅಷ್ಟು ಜಾತಿಗಳಿಂದ ಒಬ್ಬೊಬ್ಬರನ್ನ ತೆಗೆದುಕೊಂಡುಹೋಗಿ ದೂರದ ಚಂದ್ರನಲ್ಲಿ ಹಾಕಿ ಬಂದರೆ ಆಗ ಎಲ್ಲಿಯ ದೇಶ, ಎಲ್ಲಿಯ ಜಾತಿ, ಎಲ್ಲಿಯ ಧರ್ಮ! ಅಲ್ಲಿಂದ ಕಾಣುವ ಭೂಮಿಯನ್ನು ನೋಡಿದಾಗ, ಛೆ! ಎಷ್ಟು ಸುಂದರವಾದ ಒಂದೇ ಮನೆಯಲ್ಲಿ ನಾವೆಲ್ಲ ಇಷ್ಟು ದಿನ ವಾಸವಾಗಿದ್ವಲ್ಲಾ! ಆದರೂ ಯುದ್ಧ, ಹೊಡೆದಾಟ ಬಡಿದಾಟ ಅಂತ ಕಿತ್ತಾಡಿ ಕೊಳ್ಳುತ್ತಿದ್ದೆಲ್ಲ ಅಂತ ಯೋಚನೆ ಬಂದೇ ಬರುತ್ತದೆ. ವಾಪಸ್ ಭೂಮಿಗೆ ಹೋಗಿ ನಾವೆಲ್ಲರೂ ಒಂದು, ಭೂಮಿ ನಮ್ಮ ಮನೆ ಅಂತ ಎಲ್ಲರಿಗೂ ಜೋರಾಗಿ ಕೂಗಿ ಹೇಳಿಬಿಡಬೇಕು ಅಂತಾ ಎನಿಸಿಬಿಡುತ್ತದೆ.! ಅಷ್ಟು ಮನಸ್ಸಿಗೆ ಟಚ್ ಆಗುತ್ತೆ ಚಂದ್ರನ ಮೇಲಿನಿಂದ ಕಾಣುವ ಭೂಮಿಯ ನೋಟ!

ಚಂದ್ರ ಭೂಮಿಯನ್ನು ಸುತ್ತುವಾಗ ಭೂಮಿಯ ಸುತ್ತುವಿಕೆಗೆ ಸಿಂಕ್ ಆಗಿ ಸುತ್ತುತ್ತದೆ. ಇದನ್ನು ಸಿಂಕ್ರೋನಸ್ ರೋಟೇಶನ್ ಅಂತ ಕರೆಯಲಾಗುತ್ತದೆ. ಹೀಗಾಗಿ ಯಾವತ್ತೂ ಚಂದ್ರನ ಒಂದು ಭಾಗ ಭೂಮಿಗೆ ಕಾಣುವುದಿಲ್ಲ. ಇದೇ ಕಾರಣಕ್ಕೆ ಚಂದ್ರನ ಒಂದು ಭಾಗದಿಂದ ಭೂಮಿಯೂ ಯಾವತ್ತೂ ಕಾಣುವುದಿಲ್ಲ. ಆದ್ರೆ ಚಂದ್ರನ ಉಳಿದ ಅರ್ಧಭಾಗದಿಂದ ಭೂಮಿ ಯಾವತ್ತೂ ಕಣ್ಮರೆ ಆಗುವುದೇ ಇಲ್ಲ. ಕೇವಲ ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವದ ಎಡ್ಜಿನಲ್ಲಿ ಕೆಲವೇ ಕೆಲವು ಜಾಗಗಳಲ್ಲಿ ಮಾತ್ರ ಭೂಮಿಯ ಉದಯ ಮತ್ತು ಅಸ್ತಮಾನ ಎರಡನ್ನೂ ನೋಡಲು ಸಾಧ್ಯವಿದೆ.

ಭೂಮಿಯಲ್ಲಿ ಅಮಾವಾಸ್ಯೆ ಇದ್ದಾಗ, ಚಂದ್ರನಿಂದ ನೋಡಿದರೆ ಭೂಮಿ ಅತ್ಯಂತ ಕಂಗೊಳಿಸಿ ಕಾಣುತ್ತಿರುತ್ತದೆ. ಆದರೆ ಭೂಮಿಯಲ್ಲಿ ಹುಣ್ಣಿಮೆ ಇದ್ದಾಗ ಚಂದ್ರನಲ್ಲಿ ಅಮಾವಾಸ್ಯೆ ಇರುತ್ತದೆ. ಚಂದ್ರ ಭೂಮಿಗೆ ಎಷ್ಟು ಬೆಳಕು ಕೊಡುತ್ತಾನೋ, ಅದಕ್ಕಿಂತ ಆಲ್ಮೋಸ್ಟ್ 45ರಿಂದ ನೂರುಪಟ್ಟು ಹೆಚ್ಚು ಬೆಳಕನ್ನು ಭೂಮಿ ಚಂದ್ರನಿಗೆ ವಿವಿಧ ಹಂತಗಳಲ್ಲಿ ನೀಡುತ್ತದೆ.

Contact Us for Advertisement

Leave a Reply