ಪಶ್ಚಿಮ ಬಂಗಾಳ ಉಪಚುನಾವಣೆ ಡೇಟ್ ಫಿಕ್ಸ್; ದೀದಿಗೆ ಮಾಡು ಇಲ್ಲವೆ ಮಡಿ ಪಂದ್ಯ

masthmagaa.com:

ಪಶ್ಚಿಮ ಬಂಗಾಳದ ವಿಧಾನಸಭೆ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಭಬಾನಿಪುರ, ಸಂಸೇರ್​​ಗಂಜ್, ಜಂಗೀರ್​ಪುರ್​​​ ಮತ್ತು ಒಡಿಶಾದ ಪಿಪ್ಲಿ ಕ್ಷೇತ್ರಗಳಿಗೆ ಸೆಪ್ಟೆಂಬರ್ 30ರಂದು ಮತದಾನ ನಡೆಯಲಿದೆ. ಅಕ್ಟೋಬರ್​​ 3ರಂದು ಫಲಿತಾಂಶ ಹೊರಬೀಳಲಿದೆ. ದೇಶದಲ್ಲಿ ಮಹಾರಾಷ್ಟ್ರ, ತೆಲಂಗಾಣ ಮತ್ತು ಈಶಾನ್ಯ ರಾಜ್ಯಗಳ ಒಟ್ಟು 31 ವಿಧಾನಸಭೆ ಮತ್ತು 3 ಲೋಕಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಆದ್ರೆ ಕೊರೋನಾ ಕಾರಣದಿಂದಾಗಿ ಇವುಗಳನ್ನು ಮುಂದೂಡಿಕೆ ಮಾಡಲಾಗಿದೆ. ಆದ್ರೆ ಪಶ್ಚಿಮ ಬಂಗಾಳದ ವಿಶೇಷ ಮನವಿ ಮೇರೆಗೆ ಮತ್ತು ಚುನಾವಣೆ ಅಗತ್ಯವಾಗಿರೋದ್ರಿಂದ ಈ ಕ್ಷೇತ್ರಗಳಿಗೆ ಚುನಾವಣೆ ನಡೆಸ್ತಿದ್ದೀವಿ ಅಂತ ಚುನಾವಣಾ ಆಯೋಗ ಹೇಳಿದೆ. ಅಂದಹಾಗೆ ಈ ಚುನಾವಣೆಯಲ್ಲಿ ಭಬಾನಿಪುರ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದಾರೆ. ಮತ್ತು ಈ ಚುನಾವಣೆಯಲ್ಲಿ ಅವರು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಯಾಕಂದ್ರೆ ಈ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ತಮ್ಮದೇ ಶಿಷ್ಯ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ರು. ಆದ್ರೂ ಸಿಎಂ ಆಗಿರೋ ದೀದಿ, 6 ತಿಂಗಳ ಒಳಗಾಗಿ ವಿಧಾನಮಂಡಲದ ಯಾವುದಾದ್ರೂ ಒಂದು ಸದನಕ್ಕೆ ಆಯ್ಕೆಯಾಗಬೇಕಾಗುತ್ತೆ. ಆ ಅವಧಿ ಅಕ್ಟೋಬರ್ ತಿಂಗಳಲ್ಲಿ ಅಂತ್ಯವಾಗಲಿದೆ. ಹೀಗಾಗಿ ದೀದಿ ಗೆಲ್ಲೋದು ಅನಿವಾರ್ಯ.

-masthmagaa.com

Contact Us for Advertisement

Leave a Reply