ಕೇಂದ್ರದ ವಿಕಸಿತ ಭಾರತ ಸಂದೇಶಕ್ಕೆ ಚುನಾವಣಾ ಆಯೋಗದ ಎಚ್ಚರಿಕೆ!

masthmagaa.com:

ಪ್ರಧಾನಿ ನರೇಂದ್ರ ಮೋದಿಯವ್ರ ʻವಿಕಸಿತ ಭಾರತʼ ಸಂದೇಶ ಕುರಿತು ಇದೀಗ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ವಾರ್ನ್‌ ಮಾಡಿದೆ. ಈ ಸಂದೇಶವನ್ನ ವಾಟ್ಸ್ಯಾಪ್‌ಗೆ ಸೆಂಡ್‌ ಮಾಡೋದನ್ನ ಈ ಕೂಡಲೇ ನಿಲ್ಲಿಸಿ ಅಂತ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಮಾರ್ಚ್‌ 21ರಂದು ಸೂಚಿಸಿದೆ. ಅಲ್ದೇ, ʻಈ ಸಂದೇಶವನ್ನ ನೀತಿ ಸಂಹಿತೆ ಜಾರಿಯಾಗೋ ಮೊದಲೇ ರವಾನಿಸಲಾಗಿದ್ರೂ, ನೆಟ್ವರ್ಕ್‌ ಲಿಮಿಟೇಷನ್‌ಗಳಿಂದ ಕೆಲವರಿಗೆ ಈ ಮೆಸೇಜ್‌ ತಡವಾಗಿ ಮುಟ್ಟಿದೆ. ಈಗಲೂ ಕೆಲವರಿಗೆ ಮೆಸೇಜ್‌ ಸಿಗ್ತಿದೆ ಅನ್ನೋ ಕಂಪ್ಲೈಂಟ್‌ಗಳು ಕೇಳ್ಬರ್ತಿವೆ. ಇದೀಗ ನೀತಿ ಸಂಹಿತೆ ಜಾರಿಯಲ್ಲಿರೋದ್ರಿಂದ ವಿಕಸಿತ ಭಾರತ ವಾಟ್ಸ್ಯಾಪ್‌ ಮೆಸೇಜ್‌ ರವಾನಿಸೋದನ್ನ ತಕ್ಷಣವೇ ಸ್ಟಾಪ್‌ ಮಾಡಿʼ ಅಂತೇಳಿದೆ. ಅಂದ್ಹಾಗೆ ಈ ವಾಟ್ಸ್ಯಾಪ್‌ ಮೆಸ್ಸೇಜ್‌ನ್ನ ಚುನಾವಣಾ ದಿನಾಂಕ ಅನೌನ್ಸ್‌ ಮಾಡೋಕೂ ಮುನ್ನ… ಮಾರ್ಚ್‌ 15 ರಂದು ಸೆಂಡ್‌ ಮಾಡಲಾಯ್ತು ಅಂತೇಳಿ ಸಚಿವಾಲಯ ಮಾರ್ಚ್‌ 16 ರಂದು ಮಾಹಿತಿ ನೀಡಿತ್ತು.

-masthmagaa.com

Contact Us for Advertisement

Leave a Reply