masthmagaa.com: ರೈಲ್ವೆ ಪ್ರಯಾಣಿಕರು ಇನ್ಮುಂದೆ ಪ್ರಯಾಣದ ಮಧ್ಯೆ ತಮಗೆ ಬೇಕಾದ ಆಹಾರವನ್ನ ವಾಟ್ಸ್‌ಆಪ್‌ ಮೂಲಕ ಆರ್ಡ್‌ರ್‌ ಮಾಡ್ಬೋದು. ಭಾರತೀಯ ರೈಲ್ವೆಯ IRCTCಯು ಇ-ಕೇಟರಿಂಗ್‌ ಸೇವೆಯನ್ನ ವಾಟ್ಸ್‌ಆಪ್‌ ಮೂಲಕ ಪ್ರಾರಂಭಿಸಿದೆ. ಇದಕ್ಕಾಗಿ 91-8750001323 ಬ್ಯುಸಿನೆಸ್‌ ವಾಟ್ಸ್‌ಆಪ್‌ ನಂಬರ್‌ನ್ನ ಸ್ಟಾರ್ಟ್‌ ಮಾಡಿದೆ. ಇನ್ನು ಇ-ಕೇಟರಿಂಗ್‌ ಅನ್ನ ಸದ್ಯಕ್ಕೆ ಕೆಲವು ರೈಲುಗಳಲ್ಲಿ ಮಾತ್ರ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ರೈಲುಗಳಿಗೂ ವಿಸ್ತರಿಸಲಾಗುತ್ತೆ ಅಂತ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಟ್ರೇನ್‌ ಟಿಕೆಟ್‌ ಬುಕ್‌ ಮಾಡೋ ವೇಳೆ ಪ್ರಯಾಣಿಕರಿಗೆ ವಾಟ್ಸ್ಆಪ್‌ ನಂಬರ್‌ನಿಂದ ಒಂದು ಲಿಂಕ್‌ ಅನ್ನ ಕಳಿಸಲಾಗುತ್ತೆ. ಆ ಲಿಂಕ್‌ ಓಪನ್‌ ಮಾಡೋ ಮೂಲಕ ಫುಡ್‌ ಆರ್ಡರ್‌ ಮಾಡ್ಬೋದು ಅಂತ ರೈಲ್ವೆ ಇಲಾಖೆ ತಿಳಿಸಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ವಿಶ್ವದ ಹಲವು ಭಾಗಗಳಲ್ಲಿ ನಿನ್ನೆ ವಾಟ್ಸಾಪ್, ಇನ್​ಸ್ಟಾಗ್ರಾಂ ಮತ್ತು ಫೇಸ್​​ಬುಕ್ ಸರ್ವರ್ ಡೌನ್ ಆಗಿತ್ತು. ಇದ್ರಿಂದ ಸುಮಾರು 6 ಗಂಟೆಗಳ ಕಾಲ ಈ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಲು ಸಾಧ್ಯವಾಗಿಲ್ಲ. ಸರಿಯಾದ ಬಳಿಕ ಪ್ರತಿಕ್ರಿಯಿಸಿದ ಫೇಸ್​ಬುಕ್ ಸಿಇಒ ಮಾರ್ಕ್ ಜುಕರ್​ ಬರ್ಗ್​​, ಫೇಸ್​​​ಬುಕ್​, ವಾಟ್ಸಾಪ್, ಇನ್​ಸ್ಟಾಗ್ರಾಂ ಈಗ ಸರಿಯಾಗಿದೆ. ಈಗಾಗಲೇ ಆಗಿರೋ ತೊಂದ್ರೆಗೆ ದಯವಿಟ್ಟು ಕ್ಷಮಿಸಿ. ನಿಮ್ಮ ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿರೋಕೆ ನಮ್ಮ ಸೇವೆಯನ್ನು ನೀವು ಎಷ್ಟರ ಮಟ್ಟಿಗೆ ಅವಲಂಬಿಸಿದ್ದೀರಿ ಅಂತ ನನಗೆ ಗೊತ್ತಿದೆ ಅಂತ ಹೇಳಿದ್ದಾರೆ. ಅದೇ ರೀತಿ ವಾಟ್ಸಾಪ್ ಸಂಸ್ಥೆ ಕೂಡ ಟ್ವೀಟ್ ಮಾಡಿದ್ದು, ಯಾರಿಗೆಲ್ಲಾ ವಾಟ್ಸಾಪ್ ಬಳಕೆಯಲ್ಲಿ ತೊಂದ್ರೆಯಾಗಿದ್ಯೋ ಅವರೆಲ್ಲರ ಬಳಿ ಕ್ಷಮೆಯಾಚಿಸ್ತೀವಿ. ವಾಟ್ಸಾಪ್ ಮತ್ತೆ ನಾರ್ಮಲ್ ಆಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಅಂತ ಹೇಳಿದೆ. ಇನ್ನು ಈ ಕೆಲ ಗಂಟೆಗಳ ಸರ್ವರ್ ಡೌನ್​ನಿಂದಾಗಿ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್​​ ಜುಕರ್ ಬರ್ಗ್​​​ಗೆ ಭಾರಿ ನಷ್ಟವಾಗಿದೆ. 700 ಕೋಟಿ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ 52,212 ಕೋಟಿ ರೂಪಾಯಿ ನಷ್ಟವಾಗಿದೆ. ಇದ್ರಿಂದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿRead More →

masthmagaa.com: ನಿಮ್ಮ ಮೊಬೈಲ್​​ನಲ್ಲಿ ವಾಟ್ಸಾಪ್ ಓಪನ್ ಮಾಡ್ದಾಗ ಆಗಾಗ ಒಂದು ನೋಟಿಫಿಕೇಷನ್​ ಬರ್ತಿರಬೋದು. ವಾಟ್ಸಾಪ್​ ತನ್ನ ಪ್ರೈವಸಿ ಪಾಲಿಸಿಯನ್ನ ಅಪ್ಡೇಟ್​ ಮಾಡ್ತಿದೆ. ಅದನ್ನ ಅಗ್ರೀ ಮಾಡಿ ಅಥವಾ ಒಪ್ಪಿಕೊಳ್ಳಿ ಅಂತ. ಅಗ್ರೀ ಮಾಡಿಲ್ಲ ಅಂದ್ರೆ ಕೆಲವೇ ದಿನಗಳಲ್ಲಿ ವಾಟ್ಸಾಪ್​ನ ಕೆಲವೊಂದು ಫೀಚರ್ಸ್ ಯೂಸ್ ಮಾಡೋಕೆ ಆಗಲ್ಲ ಅಂತೆಲ್ಲಾ ಇರುತ್ತೆ. ಬ್ಯಾಕ್​ ಬಟನ್​ ಒತ್ತಿದ್ರೆ, ಮತ್ಯಾವತ್ತಾದ್ರೂ ಕೇಳತ್ತೆ. ಅಗ್ರೀ ಕೊಡೋವರೆಗೆ ಬಿಡಲ್ಲ. ಆಲ್ರೆಡಿ ಅಗ್ರೀ ಕೊಟ್ಟೋರಿಗೆ ಈ ನೋಟಿಫಿಕೇಷನ್ ಬರಲ್ಲ. ಅಂದ್ಹಾಗೆ ವಾಟ್ಸಾಪ್​ ಅನ್ನೋದು ಫೇಸ್​​ಬುಕ್​ನ ಅಂಗಸಂಸ್ಥೆ. ಹೀಗಾಗಿ ವಾಟ್ಸಾಪ್​ ಬಳಕೆದಾರರ ಮಾಹಿತಿಯನ್ನ ಫೇಸ್​​ಬುಕ್​ನ ಇತರ ಕಂಪನಿಗಳ​ ಜೊತೆ ಶೇರ್​ ಮಾಡೋಕೆ ಕೇಳೋ ಪರ್ಮಿಷನ್​. ಇದೀಗ ಈ ಅಪ್ಡೇಟ್​​ಗೆ ಸಂಬಂಧಿಸಿದಂತೆ ಒಂದು ಅಪ್ಡೇಟ್​ ನ್ಯೂಸ್​ ಬಂದಿದೆ. ಅದೇನಂದ್ರೆ, ಭಾರತದಲ್ಲಿ ಡೇಟಾ ಪ್ರೊಟೆಕ್ಷನ್ ಬಿಲ್ ಜಾರಿಗೆ ಬರೋವರೆಗೆ ಈ ಹೊಸ ಅಪ್ಡೇಟ್​ ಅನ್ನ ಹೋಲ್ಡ್​ನಲ್ಲಿ ಇಡ್ತೀವಿ ಅಂತ ವಾಟ್ಸಾಪ್​ ಸಂಸ್ಥೆ ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿದೆ. ಅಂದ್ರೆ ಈ ಬಿಲ್ ಬರೋವರೆಗೆ ನೀವು ಈ ಪ್ರೈವಸಿ ಪಾಲಿಸಿಯನ್ನ ಅಗ್ರೀ ಅಂತ ಕೊಡದಿದ್ರೂRead More →

masthmagaa.com: ಸೋಷಿಯಲ್ ಮೀಡಿಯಾಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಗೈಡ್​ಲೈನ್ಸ್​​ಗಳನ್ನು ಅಳವಡಿಸಿಕೊಳ್ಳಲು ಇವತ್ತು ಕೊನೆಯ ದಿನ.. ಈ ಬಗ್ಗೆ ನಿನ್ನೆಯಷ್ಟೇ ಕೇಂದ್ರ ಸರ್ಕಾರ ನೋಟಿಸ್ ಕೊಟ್ಟು ಎಚ್ಚರಿಸಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಫೇಸ್​ಬುಕ್​​, ಸರ್ಕಾರದ ಹೊಸ ನಿಯಮಗಳನ್ನು ಫಾಲೋ ಮಾಡಬೇಕು ಅನ್ಕೊಂಡಿದೀವಿ. ಈ ಬಗ್ಗೆ ಕೆಲಸ ನಡೀತಿದೆ ಅಂತ ಹೇಳಿದೆ. ಆದ್ರೆ ಗೈಡ್​ಲೈನ್ಸ್​ನ್ನು ಇವತ್ತಿಂದಲೇ ಅಳವಡಿಸಿಕೊಳ್ತೀವಿ ಅಂತ ಫೇಸ್​ಬುಕ್ ಹೇಳಿಲ್ಲ.. ಇನ್​ಸ್ಟಾಗ್ರಾಂ, ಟ್ವಿಟ್ಟರ್​ ಕೂಡ ಹೊಸ ನಿಯಮಗಳನ್ನು ಅಳವಡಿಸಿಕೊಂಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ನಾಳೆ ಯಾವ ಹೆಜ್ಜೆ ಇಡುತ್ತೆ ಅನ್ನೋ ಕುತೂಹಲ ಮೂಡಿದೆ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಎಲ್ಲಾ ಬ್ಯಾನ್ ಅಂತ ಆಲ್ರೆಡಿ RIP ಮೆಸೇಜಸ್ ಹರಿದಾಡ್ತಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಕೋರ್ಟ್​ ವಿಚಾರಣೆಯ ವೀಡಿಯೊ ಕಾನ್ಫರೆನ್ಸ್ ಲಿಂಕ್‌ಗಳನ್ನ ಹಂಚಿಕೊಳ್ಳಲು ಇನ್ಮುಂದೆ ವಾಟ್ಸಾಪ್ ಗ್ರೂಪ್​ಗಳನ್ನ ಬಳಸೋದಿಲ್ಲ ಅಂತ ಸುಪ್ರೀಂಕೋರ್ಟ್ ಪ್ರಕಟಣೆ ಹೊರಡಿಸಿದೆ. ಮಾರ್ಚ್​ 1ರಿಂದ ವಿಡಿಯೋ ಕಾನ್ಫರೆನ್ಸ್ ಲಿಂಕ್​ಗಳನ್ನ ವಾಟ್ಸಾಪ್ ಬದಲು ವಕೀಲರು ಮತ್ತು ಕಕ್ಷಿದಾರರ ಇ-ಮೇಲ್ ಐಡಿಗೆ ಅಥವಾ ಎಸ್​ಎಂಎಸ್​​ ಮೂಲಕ ಮೊಬೈಲ್ ನಂಬರ್​ಗೆ ಕಳಿಸಲಾಗುತ್ತೆ. ಫೇಸ್​ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹೊಸ ನಿಯಮಗಳನ್ನ ಬಿಡುಗಡೆ ಮಾಡಿದ ಬೆನ್ನಲ್ಲೇ ಸುಪ್ರೀಂಕೋರ್ಟ್​ ಈ ನಿರ್ಧಾರಕ್ಕೆ ಬಂದಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಬಗ್ಗೆ ವಿವಾದ ಭುಗಿಲೆದ್ದಿರೋ ಬೆನ್ನಲ್ಲೇ ಕೇಂದ್ರ ಸರ್ಕಾರ ವಾಟ್ಸಾಪ್​ ರೀತಿಯಲ್ಲಿ ತನ್ನದೇ ಆದ ಮೆಸೇಂಜಿಂಗ್ ಅಪ್ಲಿಕೇಷನ್ ಅನ್ನ ಅಭಿವೃದ್ಧಿಪಡಿಸಿದೆ. ಇದರ ಹೆಸರು ಸಂದೇಶ್​ (Sandes) ಅಂತ.. ಕನ್ನಡದಲ್ಲೂ ಸಂದೇಶ ಅಂತಾನೇ ಆಗುತ್ತೆ. ಈ ಅಪ್ಲಿಕೇಶನ್​ ಅನ್ನ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC) ಅಭಿವೃದ್ಧಿಪಡಿಸಿದೆ. ಇದರ ಕಲರ್​ ಕಾಂಬಿನೇಷನ್​ ತ್ರಿವರ್ಣ ಧ್ವಜದಂತೆ ಕೇಸರಿ, ಬಿಳಿ, ಹಸಿರು ಬಣ್ಣ ಮತ್ತು ಮಧ್ಯದಲ್ಲಿ ಅಶೋಕ ಚಕ್ರ ಹೊಂದಿದೆ. ಈ ಅಪ್ಲಿಕೇಷನ್​ ಅಫೀಷಿಯಲ್ ಆಗಿ ಲಾಂಚ್ ಆಗದಿದ್ರೂ ಆಪಲ್​ ಆಪ್ ಸ್ಟೋರ್​​ನಲ್ಲಿ ಈಗಾಗಲೇ ಡೌನ್​ಲೋಡ್​ಗೆ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್​ಗೆ ಇನ್ನೂ ಬಂದಿಲ್ಲ. ಆದ್ರೆ ಆಂಡ್ರಾಯ್ಡ್​ ಫೋನ್ ಬಳಸೋರು ಈ ಸಂದೇಶ್ ಆಪನ್ನ ಡೌನ್​ಲೋಡ್​ ಮಾಡಲು ಮತ್ತೊಂದು ದಾರಿ ಇದೆ. https://www.gims.gov.in/dash/dlink ಈ ಲಿಂಕನ್ನ ನಿಮ್ಮ ಮೊಬೈಲ್​ನಲ್ಲಿ ಓಪನ್ ಮಾಡಿ ಸಂದೇಶ್ ಅಪ್ಲಿಕೇಶನ್ ಡೌನ್​ ಮಾಡಿಕೊಳ್ಳಬಹುದು. ಆಪಲ್​ ಆಪ್ ಸ್ಟೋರ್​ನಲ್ಲಿ ಸಂದೇಶ್ ಅನ್ನೋ ಸಾಕಷ್ಟು ಅಪ್ಲಿಕೇಷನ್​ಗಳು ಇವೆ. ನಿಮಗೆ ಕನ್ಫೂಸ್ ಆಗಬಹುದು. ಹೀಗಾಗಿ NIC – ನ್ಯಾಷನಲ್ ಇನ್ಫಾರ್ಮೆಟಿಕ್ಸ್Read More →

masthmagaa.com: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವಿಟ್ಟರ್ ಮತ್ತು ಕೇಂದ್ರ ಸರ್ಕಾರ ನಡುವೆ ಸಂಘರ್ಷ ನಡೀತಿರುವ ಮಧ್ಯೆಯೇ ಸುಳ್ಳು ಸುದ್ದಿ ಹರಡಲು, ಹಿಂಸೆಯನ್ನ ಪ್ರಚೋದಿಸಲು ಸೋಷಿಯಲ್ ಮೀಡಿಯಾವನ್ನ ಮಿಸ್​ ಯೂಸ್​ ಮಾಡ್ಕೊಂಡ್ರೆ ಕಠಿಣ ಕ್ರಮ ಕೈಗೊಳ್ಳೋದಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಸಿದ್ದಾರೆ. ಪ್ರಮುಖವಾಗಿ ಫೇಸ್​ಬುಕ್​, ವಾಟ್ಸಾಪ್​, ಟ್ವಿಟ್ಟರ್, ಲಿಂಕ್ಡ್​ಇನ್​ ಸೇರಿದಂತೆ ಕೆಲವೊಂದು ಸೋಷಿಯಲ್ ಮೀಡಿಯಾವನ್ನ ಹೆಸರಿಸಿದ ಅವರು, ನಿಮಗೆ ಭಾರತದಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ನಿಮ್ಮ ಬ್ಯುಸಿನೆಸ್​ ನಡೆಸಲು, ದುಡ್ಡು ಮಾಡಲು ನೀವು ಸ್ವಾಂತಂತ್ರ್ಯರು. ಅದರ ಜೊತೆಗೆ ಭಾರತದ ಕಾನೂನು, ಸಂವಿಧಾನವನ್ನ ಕೂಡ ನೀವು ಫಾಲೋ ಮಾಡಬೇಕು. ಮಾತನಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದ್ರೆ ಆರ್ಟಿಕಲ್ 19ಎ ಪ್ರಕಾರ ಅದಕ್ಕೂ ಕೆಲವೊಂದು ನಿರ್ಬಂಧಗಳಿವೆ. ನಾವು ಸೋಷಿಯಲ್ ಮೀಡಿಯಾವನ್ನ ತುಂಬಾ ರೆಸ್ಪೆಕ್ಟ್ ಮಾಡ್ತೀವಿ. ಡಿಜಿಟಲ್ ಇಂಡಿಯಾದಲ್ಲಿ ಅವುಗಳ ಪಾತ್ರ ದೊಡ್ಡದಿದೆ ಅಂತಾನೂ ಹೇಳಿದ್ರು. -masthmagaa.com Share on: WhatsAppContact Us for AdvertisementRead More →

masthmagaa.com: ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಬಗ್ಗೆ ಸಾಕಷ್ಟು ಚರ್ಚೆ ನಡೀತಿರುವಾಗಲೇ, ಭಾರತೀಯ ಬಳಕೆದಾರರನ್ನ ವಾಟ್ಸಾಪ್ ಕಂಪನಿ​ ಡಿಫ್ರೆಂಟ್​ ಆಗಿ ಟ್ರೀಟ್ ಮಾಡ್ತಿದೆ. ಯುರೋಪಿನ ಬಳಕೆದಾರರಕ್ಕಿಂತ ಭಿನ್ನವಾಗಿ ನೋಡ್ತಿದೆ ಅಂತ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್​ಗೆ ಹೇಳಿದೆ. ವಾಟ್ಸಾಪ್​ ಹೊಸ ಪ್ರೈವಸಿ ಪಾಲಿಸಿಯನ್ನ ಬಳಕೆದಾರರು ಒಪ್ಪಿಕೊಳ್ಳಲೇ ಬೇಕು. ಅದನ್ನ ಒಪ್ಪಿಕೊಳ್ಳದೇ ಇರಲು ಆಪ್ಷನ್ನೇ​ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋರ್ಟ್​ಗೆ ಈ ರೀತಿ ಹೇಳಿದೆ. ಹೊಸ ಪ್ರೈವಸಿ ಪಾಲಿಸಿಯನ್ನ ಪ್ರಶ್ನಿಸಿ ವಕೀಲರೊಬ್ರು ಅರ್ಜಿ ಸಲ್ಲಿಸಿದ್ರು. ಅದರ ವಿಚಾರಣೆ ವೇಳೆ ಈ ರೀತಿ ಹೇಳಿದೆ. ಅಂದ್ಹಾಗೆ ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಪ್ರಕಾರ, ಬಳಕೆದಾರರು ಅದನ್ನ ಒಪ್ಪಿಕೊಳ್ಳಬೇಕು ಅಥವಾ ಅಪ್ಲಿಕೇಶನ್​ನಿಂದ ಹೊರಬರಬೇಕು. ಆದ್ರೆ ಪಾಲಿಸಿಯನ್ನ ಒಪ್ಪಿಕೊಳ್ಳದೇ ವಾಟ್ಸಾಪ್​ನಲ್ಲಿ ಮುಂದುವರಿಯಲು ಅವಕಾಶವಿಲ್ಲ. ಹೊಸ ಪ್ರೈವಸಿ ಪಾಲಿಸಿ ಒಪ್ಪಿಕೊಂಡ್ರೆ, ಫೇಸ್​ಬುಕ್​ ಒಡೆತನದ ಅಥವಾ ಥರ್ಡ್​ ಪಾರ್ಟಿ ಅಪ್ಲಿಕೇಶನ್​ಗಳ ಜೊತೆ ನಿಮ್ಮ ಡೇಟಾ ಶೇರ್ ಮಾಡಲು ವಾಟ್ಸಾಪ್​ಗೆ ಅನುಮತಿ ಕೊಟ್ಟಂತಾಗುತ್ತೆ. ಆದ್ರೆ ಯುರೋಪಿನ ದೇಶಗಳಲ್ಲಿ ಹೀಗಿಲ್ಲ. ಇದೇ ಈಗ ವಿವಾದಕ್ಕೆ ಗುರಿಯಾಗಿದ್ದು,Read More →

masthmagaa.com: ಸಾಕಷ್ಟು ಚರ್ಚೆಗೆ ಗ್ರಾಸವಾಗಿರೋ ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿಯನ್ನ ವಾಪಸ್ ಪಡೆಯುವಂತೆ ಅಥವಾ ವಿತ್​ಡ್ರಾ ಮಾಡುವಂತೆ ಕೇಂದ್ರ ಸರ್ಕಾರ ವಾಟ್ಸಾಪ್​ಗೆ ಹೇಳಿದೆ. ಈ ಸಂಬಂಧ ವಾಟ್ಸಾಪ್​ನ ಗ್ಲೋಬಲ್ ಸಿಇಒ ವಿಲ್ ಕ್ಯಾಚ್​​ಕಾರ್ಟ್​ಗೆ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ಪತ್ರ ಬರೆದಿದೆ. ಈ ಪತ್ರದಲ್ಲಿ ವಾಟ್ಸಾಪ್​ನ ‘All-or-Nothing’ ಅಪ್ರೋಚ್​ಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಅಂದ್ರೆ ಹೊಸ ಪ್ರೈವಸಿ ಪಾಲಿಸಿ ಪ್ರಕಾರ ವಾಟ್ಸಾಪ್​ ತನ್ನ ಬಳಕೆದಾರರ ಡೇಟಾವನ್ನ ಫೇಸ್​ಬುಕ್​ ಒಡೆತನದ ಇತರೆ ಕಂಪನಿಗಳ ಜೊತೆ ಇಂಟಿಗ್ರೇಟ್ ಮಾಡಲು ಅನುಮತಿ ಕೇಳ್ತಿದೆ. ಇದಕ್ಕೆ ಅಕ್ಸೆಪ್ಟ್ ಕೊಡಲೇಬೇಕು. ಅಕ್ಸೆಪ್ಟ್​ ಕೊಡದೇ ಇರಲು ಆಪ್ಷನ್ನೇ ಇಲ್ಲ. ಹಾಗೆ ಮಾಡಿಬಿಟ್ಟಿದೆ ವಾಟ್ಸಾಪ್​. ಇದನ್ನ ಕೇಂದ್ರ ಸರ್ಕಾರ ವಿರೋಧಿಸಿದೆ. ಇನ್ನು ಹೆಚ್ಚು ವಾಟ್ಸಾಪ್​ ಬಳಕೆದಾರರನ್ನ ಹೊಂದಿರುವ ಭಾರತಕ್ಕೊಂದು ಪ್ರೈವಸಿ ಪಾಲಿಸಿ, ಯುರೋಪಿಯನ್​ ಯೂನಿಯನ್​ಗೊಂದು ಪ್ರೈವಸಿ ಪಾಲಿಸಿ ಮಾಡಿರೋದನ್ನೂ ಸರ್ಕಾರ ವಿರೋಧಿಸಿದೆ. ಪರ್ಸನಲ್ ಡೇಟಾ ಪ್ರೊಟೆಕ್ಷನ್​ ಬಿಲ್ ಅನ್ನು ಸಂಸತ್​ ಪರಿಗಣಿಸಿರುವ ಈ ಸಂದರ್ಭದಲ್ಲಿ ಪ್ರೈವಸಿ ಪಾಲಿಸಿಯಲ್ಲಿ ಚೇಂಜಸ್ ಮಾಡಿದ್ದೇಕೆ ಅಂತ ಒಟ್ಟು 18Read More →

masthmagaa.com: ನಮ್ಮ-ನಿಮ್ಮ ಜೀವನದ ಭಾಗವೇ ಆಗಿಹೋಗಿರೋ ವಾಟ್ಸಾಪ್,​ ನಮ್ಮ ಖಾಸಗಿ ಮಾಹಿತಿಗೆ ಕೈಹಾಕ್ತಿದೆ ಅಂತ ಕಳೆದ ಕೆಲ ದಿನಗಳಿಂದ ನಾನಾ ರೀತಿಯ ಚರ್ಚೆ ಆಗ್ತಿದೆ. ಇದೀಗ ಈ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿದೆ. ವಾಟ್ಸಾಪ್ ಬ್ಯಾನ್ ಮಾಡಬೇಕು ಅನ್ನೋ ಮನವಿ ಈಗ ಕೇಂದ್ರ ಸರ್ಕಾರವನ್ನ ತಲುಪಿದೆ. ವಿಚಾರವನ್ನ ಸರಿಯಾಗಿ ಅರ್ಥಮಾಡಿಕೊಳ್ಳಲು ಈ ವರದಿಯನ್ನ ಪೂರ್ತಿ ಓದಿ. ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಬಗ್ಗೆ ತನಿಖೆ ನಡೆಸಲು ಇನ್ಫಾರ್ಮೇಶನ್ ಟೆಕ್ನಾಲಜಿ ಇಲಾಖೆ ಮುಂದಾಗಿದೆ. ಕೆಲ ದಿನಗಳಿಂದ ವಾಟ್ಸಾಪ್ ನಮಗೆಲ್ಲಾ ಒಂದು ‘ಪಾಪ್-ಅಪ್ ನೋಟಿಫಿಕೇಶನ್’ ತೋರಿಸ್ತಿದೆ. ಅದರಲ್ಲಿ ಹೊಸ ಖಾಸಗಿತನ ನಿಯಮ ಇದೆ ಮತ್ತು ಕೆಳಗೆ ‘ಅಗ್ರೀ ಆರ್ ಕ್ಲೋಸ್’ ಅಂತ ಆಪ್ಶನ್ ಇದೆ. ಕಂಪನಿಯ ಪ್ರಕಾರ ನಾವು ನೀವು ವಾಟ್ಸಾಪ್ ಯೂಸ್ ಮಾಡ್ಬೇಕು ಅಂದ್ರೆ ಇದಕ್ಕೆ ಫೆಬ್ರವರಿ 8ರ ಒಳಗೆ ಓಕೇ ಮಾಡಲೇಬೇಕು. ಈಗಾಗಲೇ ನಮ್ಮಲ್ಲಿ ಬಾಳ ಜನ ಮೆಸೇಜಸ್ ಒದೋ ಅರ್ಜೆಂಟಲ್ಲಿ ‘ಎಂತ ಇದು ಅಡ್ಡ ಬಂತಲ್ಲ’ ಅಂತ ಅಗ್ರೀ ಕೊಟ್ಟಾಗಿರುತ್ತೆ ಬಿಡಿ. ಈಗ ವಾಟ್ಸಾಪ್​​ನRead More →