ಬಂತು ನೋಡಿ ಮೇಡ್ ಇನ್ ಇಂಡಿಯಾ ವಾಟ್ಸಾಪ್​..!

masthmagaa.com:

ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಬಗ್ಗೆ ವಿವಾದ ಭುಗಿಲೆದ್ದಿರೋ ಬೆನ್ನಲ್ಲೇ ಕೇಂದ್ರ ಸರ್ಕಾರ ವಾಟ್ಸಾಪ್​ ರೀತಿಯಲ್ಲಿ ತನ್ನದೇ ಆದ ಮೆಸೇಂಜಿಂಗ್ ಅಪ್ಲಿಕೇಷನ್ ಅನ್ನ ಅಭಿವೃದ್ಧಿಪಡಿಸಿದೆ. ಇದರ ಹೆಸರು ಸಂದೇಶ್​ (Sandes) ಅಂತ.. ಕನ್ನಡದಲ್ಲೂ ಸಂದೇಶ ಅಂತಾನೇ ಆಗುತ್ತೆ. ಈ ಅಪ್ಲಿಕೇಶನ್​ ಅನ್ನ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC) ಅಭಿವೃದ್ಧಿಪಡಿಸಿದೆ. ಇದರ ಕಲರ್​ ಕಾಂಬಿನೇಷನ್​ ತ್ರಿವರ್ಣ ಧ್ವಜದಂತೆ ಕೇಸರಿ, ಬಿಳಿ, ಹಸಿರು ಬಣ್ಣ ಮತ್ತು ಮಧ್ಯದಲ್ಲಿ ಅಶೋಕ ಚಕ್ರ ಹೊಂದಿದೆ. ಈ ಅಪ್ಲಿಕೇಷನ್​ ಅಫೀಷಿಯಲ್ ಆಗಿ ಲಾಂಚ್ ಆಗದಿದ್ರೂ ಆಪಲ್​ ಆಪ್ ಸ್ಟೋರ್​​ನಲ್ಲಿ ಈಗಾಗಲೇ ಡೌನ್​ಲೋಡ್​ಗೆ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್​ಗೆ ಇನ್ನೂ ಬಂದಿಲ್ಲ. ಆದ್ರೆ ಆಂಡ್ರಾಯ್ಡ್​ ಫೋನ್ ಬಳಸೋರು ಈ ಸಂದೇಶ್ ಆಪನ್ನ ಡೌನ್​ಲೋಡ್​ ಮಾಡಲು ಮತ್ತೊಂದು ದಾರಿ ಇದೆ. https://www.gims.gov.in/dash/dlink ಈ ಲಿಂಕನ್ನ ನಿಮ್ಮ ಮೊಬೈಲ್​ನಲ್ಲಿ ಓಪನ್ ಮಾಡಿ ಸಂದೇಶ್ ಅಪ್ಲಿಕೇಶನ್ ಡೌನ್​ ಮಾಡಿಕೊಳ್ಳಬಹುದು. ಆಪಲ್​ ಆಪ್ ಸ್ಟೋರ್​ನಲ್ಲಿ ಸಂದೇಶ್ ಅನ್ನೋ ಸಾಕಷ್ಟು ಅಪ್ಲಿಕೇಷನ್​ಗಳು ಇವೆ. ನಿಮಗೆ ಕನ್ಫೂಸ್ ಆಗಬಹುದು. ಹೀಗಾಗಿ NIC – ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ಡೆವಲಪ್ ಮಾಡಿರೋ ಅಪ್ಲಿಕೇಷನ್ ಅನ್ನ ಡೌನ್​ಲೋಡ್​ ಮಾಡಿಕೊಳ್ಳಿ. ಡೌನ್​ಲೋಡ್ ಆದ ಬಳಿಕ ಆಪ್ ಓಪನ್ ಮಾಡಿ, ಆಗ ನಿಮ್ಮ ಮೊಬೈಲ್ ನಂಬರ್ ಕೇಳುತ್ತೆ. ಅದನ್ನ ಟೈಪ್ ಮಾಡಿ. ನಂತ್ರರ ನಿಮ್ಮ ಮೊಬೈಲ್​ಗೆ ಬರುವ ಒಟಿಪಿಯನ್ನ ಎಂಟರ್ ಮಾಡಿ. ಬಳಿಕ ನಿಮ್ಮ ಜೆಂಡರ್ ಸೆಲೆಕ್ಟ್ ಮಾಡಿ. ನಂತ್ರ ಮೊಬೈಲ್​ನಲ್ಲಿರೋ​ ಕಾಂಟ್ಯಾಕ್ಟ್ಸ್​​ ಸಿಂಕ್ ಆಗುತ್ತೆ. ಆಮೇಲೆ ನಿಮ್ಮ ಫ್ರೆಂಡ್ಸ್ ಯಾರೆಲ್ಲಾ ಸಂದೇಶ್ ಆಪ್ ಯೂಸ್ ಮಾಡ್ತಿದ್ದಾರೋ ಅವರೊಂದಿಗೆ ನೀವು ಚಾಟ್ ಮಾಡೋಕೆ, ಆಡಿಯೋ, ವಿಡಿಯೋ ಕಾಲ್..​ ಹೀಗೆ ವಾಟ್ಸಾಪ್​ನಲ್ಲಿ ಏನೇನಿದೆಯೋ (ಸ್ಟೇಟಸ್​ ಹೊರತುಪಡಿಸಿ) ಎಲ್ಲವನ್ನ ಮಾಡ್ಬೋದು. ಮತ್ತೆ ಇಲ್ಲಿ ಕಳಿಸೋ ಮೆಸೇಜ್​ಗಳು ವಾಟ್ಸಾಪ್​ನಂತೆ ಎಂಡ್​ ಟು ಎಂಡ್​ ಎನ್​ಕ್ರಿಪ್ಟ್​ ಆಗಿರುತ್ತೆ. ಸಂದೇಶ್ ಜೊತೆಗೆ ಕೇಂದ್ರ ಸರ್ಕಾರ ಸಂವಾದ್ ಅನ್ನೋ ಮತ್ತೊಂದು ಆಪ್ ಡೆವಲಪ್ ಮಾಡ್ತಿದೆ. ಇದು ಟ್ವಿಟ್ಟರ್​ಗೆ ಪರ್ಯಾಯ ಆಪ್ ಆಗಿ ಹೊರ ಹೊಮ್ಮುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply