AI ಮಾರ್ಕೆಟ್‌ನಲ್ಲಿ ಅಧಿಪತ್ಯ ಸ್ಥಾಪಿಸಲು ಮುಂದಾದ ಮೆಟಾ ಕಂಪನಿ!

masthmagaa.com:

ಭರ್ಜರಿಯಾಗಿ ಬೂಮ್‌ ಆಗ್ತಿರೋ AI ಮಾರ್ಕೆಟ್‌ನಲ್ಲಿ ಅಧಿಪತ್ಯ ಸ್ಥಾಪಿಸೋಕೆ ಟೆಕ್‌ ದಿಗ್ಗಜ ಕಂಪನಿಗಳು ರೇಸ್‌ಗೆ ಬಿದ್ದಿವೆ. ಇದೀಗ ಸೋಷಿಯಲ್‌ ಮೀಡಿಯಾ ದೈತ್ಯ ಮೆಟಾ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಚಾಟ್‌ GPTಗೆ ಟಕ್ಕರ್‌ ಕೊಡೋಕೆ ಲಾಮಾ 3 AI ಮಾಡೆಲ್‌ನ್ನ ತನ್ನ ವರ್ಚುವಲ್‌ ಅಸಿಸ್ಟೆಂಟ್‌ ಜೊತೆ ಇಂಟಿಗ್ರೇಟ್‌ ಮಾಡ್ತಿದೆ. ಈ ವರ್ಚುವಲ್‌ ಅಸಿಸ್ಟೆಂಟ್‌ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸಾಪ್‌, ಮೆಸ್ಸೆಂಜರ್‌ ಹೀಗೆ ಮೆಟಾದ ಎಲ್ಲಾ ಸೋಷಿಯಲ್‌ ಮೀಡಿಯಾಗಳಲ್ಲೂ ಕಾಣಿಸಿಕೊಳ್ಳಲಿದೆ. ಚಾಟ್‌ ಸೆಕ್ಷನ್‌ ಅಷ್ಟೇ ಅಲ್ಲದೇ ಸರ್ಚ್‌ ಬಾಕ್ಸ್‌ನಲ್ಲಿ ಕೂಡ ಈ AI ಇರಲಿದೆ. ಟೆಕ್ಸ್ಟ್‌ ಸೇರಿದಂತೆ ಇಮೇಜ್‌ ರೆಕಗ್ನಿಷನ್‌ನಲ್ಲಿ ಕೂಡ ಈ AIನ ಟ್ರೇನ್‌ ಮಾಡಲಾಗಿದೆ ಅಂತ ಮೆಟಾ ಹೇಳ್ಕೊಂಡಿದೆ. ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಭಾರತದಲ್ಲಿ ಕೆಲವರಿಗೆ ಈ ಫೀಚರ್‌ ಲಭ್ಯ ಆಗಿದೆ. ಆದ್ರೆ ಪೂರ್ಣಪ್ರಮಾಣದಲ್ಲಿ ಯಾವಾಗ ಬರುತ್ತೆ ಅನ್ನೋದ್ರ ಅಪ್‌ಡೇಟ್‌ ಇಲ್ಲ. ಸದ್ಯ ಅಮೆರಿಕ ಸೇರಿದಂತೆ ಕೆನಡಾ, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಸಿಂಗಪೂರ್‌ನಲ್ಲಿ ಮೆಟಾ ಈ ಅಪ್‌ಡೇಟ್‌ನ್ನ ನೀಡಿದೆ. ಕಠಿಣ ಪ್ರೈವಸಿ ನಿಯಮಗಳಿರೋದ್ರಿಂದ‌ ಯುರೋಪ್‌ನಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡ್ತಾ ಇದೆ.

-masthmagaa.com

Contact Us for Advertisement

Leave a Reply