ತನ್ನ ಪ್ರೈವೆಸಿ ಅಪ್ಡೇಟ್ ಹೋಲ್ಡ್​​ನಲ್ಲಿಟ್ಟ ವಾಟ್ಸಾಪ್!

masthmagaa.com:

ನಿಮ್ಮ ಮೊಬೈಲ್​​ನಲ್ಲಿ ವಾಟ್ಸಾಪ್ ಓಪನ್ ಮಾಡ್ದಾಗ ಆಗಾಗ ಒಂದು ನೋಟಿಫಿಕೇಷನ್​ ಬರ್ತಿರಬೋದು. ವಾಟ್ಸಾಪ್​ ತನ್ನ ಪ್ರೈವಸಿ ಪಾಲಿಸಿಯನ್ನ ಅಪ್ಡೇಟ್​ ಮಾಡ್ತಿದೆ. ಅದನ್ನ ಅಗ್ರೀ ಮಾಡಿ ಅಥವಾ ಒಪ್ಪಿಕೊಳ್ಳಿ ಅಂತ. ಅಗ್ರೀ ಮಾಡಿಲ್ಲ ಅಂದ್ರೆ ಕೆಲವೇ ದಿನಗಳಲ್ಲಿ ವಾಟ್ಸಾಪ್​ನ ಕೆಲವೊಂದು ಫೀಚರ್ಸ್ ಯೂಸ್ ಮಾಡೋಕೆ ಆಗಲ್ಲ ಅಂತೆಲ್ಲಾ ಇರುತ್ತೆ. ಬ್ಯಾಕ್​ ಬಟನ್​ ಒತ್ತಿದ್ರೆ, ಮತ್ಯಾವತ್ತಾದ್ರೂ ಕೇಳತ್ತೆ. ಅಗ್ರೀ ಕೊಡೋವರೆಗೆ ಬಿಡಲ್ಲ. ಆಲ್ರೆಡಿ ಅಗ್ರೀ ಕೊಟ್ಟೋರಿಗೆ ಈ ನೋಟಿಫಿಕೇಷನ್ ಬರಲ್ಲ. ಅಂದ್ಹಾಗೆ ವಾಟ್ಸಾಪ್​ ಅನ್ನೋದು ಫೇಸ್​​ಬುಕ್​ನ ಅಂಗಸಂಸ್ಥೆ. ಹೀಗಾಗಿ ವಾಟ್ಸಾಪ್​ ಬಳಕೆದಾರರ ಮಾಹಿತಿಯನ್ನ ಫೇಸ್​​ಬುಕ್​ನ ಇತರ ಕಂಪನಿಗಳ​ ಜೊತೆ ಶೇರ್​ ಮಾಡೋಕೆ ಕೇಳೋ ಪರ್ಮಿಷನ್​. ಇದೀಗ ಈ ಅಪ್ಡೇಟ್​​ಗೆ ಸಂಬಂಧಿಸಿದಂತೆ ಒಂದು ಅಪ್ಡೇಟ್​ ನ್ಯೂಸ್​ ಬಂದಿದೆ. ಅದೇನಂದ್ರೆ, ಭಾರತದಲ್ಲಿ ಡೇಟಾ ಪ್ರೊಟೆಕ್ಷನ್ ಬಿಲ್ ಜಾರಿಗೆ ಬರೋವರೆಗೆ ಈ ಹೊಸ ಅಪ್ಡೇಟ್​ ಅನ್ನ ಹೋಲ್ಡ್​ನಲ್ಲಿ ಇಡ್ತೀವಿ ಅಂತ ವಾಟ್ಸಾಪ್​ ಸಂಸ್ಥೆ ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿದೆ. ಅಂದ್ರೆ ಈ ಬಿಲ್ ಬರೋವರೆಗೆ ನೀವು ಈ ಪ್ರೈವಸಿ ಪಾಲಿಸಿಯನ್ನ ಅಗ್ರೀ ಅಂತ ಕೊಡದಿದ್ರೂ ಯಾವುದೇ ಫೀಚರ್ ಅನ್ನ ತೆಗೆದುಹಾಕಲ್ಲ ಅಂತರ್ಥ. ಹಾಗಂತ ವಾಟ್ಸಾಪ್​​ ಓಪನ್ ಮಾಡ್ದಾಗ ತೋರಿಸೋ ನೋಟಿಫಿಕೇಷನ್​ ಕಾಟ ನಿಲ್ಲುತ್ತೆ ಅಂತಲ್ಲ. ಅದನ್ನ ತೋರ್ಸೋದು ತೋರಿಸ್ತಾ ಇರ್ತೀವಿ ಅಂತ ವಾಟ್ಸಾಪ್ ಹೇಳಿದೆ.

-masthmagaa.com

Contact Us for Advertisement

Leave a Reply