ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಮುಂದಾದ ಜಪಾನ್!

masthmagaa.com:

ಏಷ್ಯಾದ ಎರಡನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿರೊ ಜಪಾನ್‌ ಈಗ ಭಾರತದ ಫೈನಾನ್ಶಿಯಲ್‌ ಮತ್ತು ಫಿಜಿಕಲ್‌ ಸೆಕ್ಟರ್‌ನಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಎದುರು ನೋಡ್ತಿದೆ. ಹೀಗಂತ ವಿಶ್ವದ ಪ್ರಮುಖ ಫೈನಾನ್ಶಿಯಲ್‌ ಸರ್ವಿಸ್‌ ಗ್ರೂಪ್‌ ನೋಮುರಾ ವರದಿ ಮಾಡಿದೆ. ಅಲ್ದೇ ಭಾರತದಲ್ಲಿ ಜಪಾನ್‌ನಿಂದ ವಿದೇಶಿ ನೇರ ಹೂಡಿಕೆ (FDI) ಹೆಚ್ಚುತ್ತಿದ್ದು, 2022ರ ಕೊನೆಯಲ್ಲಿನ ಅಂಕಿ ಅಂಶಗಳ ಪ್ರಕಾರ ಜಪಾನ್‌ನಿಂದ ಡೆವಲ್‌ಪಿಂಗ್‌ ಕಂಟ್ರಿಗಳಲ್ಲಿ ಇನ್ವೇಸ್ಟ್‌ ಮಾಡೊ ಲಿಸ್ಟ್‌ನಲ್ಲಿ ಭಾರತವೇ ಅಗ್ರ ಸ್ಥಾನದಲ್ಲಿದೆ ಅಂತ ಈ ರಿಪೋರ್ಟ್‌ ತಿಳಿಸಿದೆ. ಅಲ್ದೇ ಜಪಾನ್‌ನಲ್ಲಿನ ಹೂಡಿಕೆದಾರರು ಕೂಡ ಭಾರತದಲ್ಲಿ ಇನ್ವೇಸ್ಟ್‌ ಮಾಡಲು ಹೆಚ್ಚಿನ ಒಲವು ತೋರ್ತಿದ್ದಾರೆ ಅಂತ ರಿಪೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply