ಫೇಸ್​ಬುಕ್, ಇನ್​ಸ್ಟಾಗ್ರಾಂ ಮತ್ತು ವಾಟ್ಸಾಪ್​ ಸರ್ವರ್ ಡೌನ್!

masthmagaa.com:

ವಿಶ್ವದ ಹಲವು ಭಾಗಗಳಲ್ಲಿ ನಿನ್ನೆ ವಾಟ್ಸಾಪ್, ಇನ್​ಸ್ಟಾಗ್ರಾಂ ಮತ್ತು ಫೇಸ್​​ಬುಕ್ ಸರ್ವರ್ ಡೌನ್ ಆಗಿತ್ತು. ಇದ್ರಿಂದ ಸುಮಾರು 6 ಗಂಟೆಗಳ ಕಾಲ ಈ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಲು ಸಾಧ್ಯವಾಗಿಲ್ಲ. ಸರಿಯಾದ ಬಳಿಕ ಪ್ರತಿಕ್ರಿಯಿಸಿದ ಫೇಸ್​ಬುಕ್ ಸಿಇಒ ಮಾರ್ಕ್ ಜುಕರ್​ ಬರ್ಗ್​​, ಫೇಸ್​​​ಬುಕ್​, ವಾಟ್ಸಾಪ್, ಇನ್​ಸ್ಟಾಗ್ರಾಂ ಈಗ ಸರಿಯಾಗಿದೆ. ಈಗಾಗಲೇ ಆಗಿರೋ ತೊಂದ್ರೆಗೆ ದಯವಿಟ್ಟು ಕ್ಷಮಿಸಿ. ನಿಮ್ಮ ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿರೋಕೆ ನಮ್ಮ ಸೇವೆಯನ್ನು ನೀವು ಎಷ್ಟರ ಮಟ್ಟಿಗೆ ಅವಲಂಬಿಸಿದ್ದೀರಿ ಅಂತ ನನಗೆ ಗೊತ್ತಿದೆ ಅಂತ ಹೇಳಿದ್ದಾರೆ. ಅದೇ ರೀತಿ ವಾಟ್ಸಾಪ್ ಸಂಸ್ಥೆ ಕೂಡ ಟ್ವೀಟ್ ಮಾಡಿದ್ದು, ಯಾರಿಗೆಲ್ಲಾ ವಾಟ್ಸಾಪ್ ಬಳಕೆಯಲ್ಲಿ ತೊಂದ್ರೆಯಾಗಿದ್ಯೋ ಅವರೆಲ್ಲರ ಬಳಿ ಕ್ಷಮೆಯಾಚಿಸ್ತೀವಿ. ವಾಟ್ಸಾಪ್ ಮತ್ತೆ ನಾರ್ಮಲ್ ಆಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಅಂತ ಹೇಳಿದೆ. ಇನ್ನು ಈ ಕೆಲ ಗಂಟೆಗಳ ಸರ್ವರ್ ಡೌನ್​ನಿಂದಾಗಿ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್​​ ಜುಕರ್ ಬರ್ಗ್​​​ಗೆ ಭಾರಿ ನಷ್ಟವಾಗಿದೆ. 700 ಕೋಟಿ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ 52,212 ಕೋಟಿ ರೂಪಾಯಿ ನಷ್ಟವಾಗಿದೆ. ಇದ್ರಿಂದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಒಂದು ಸ್ಥಾನ ಕೆಳಗೆ ಕುಸಿದಿದ್ದು, 4ರಿಂದ 5ನೇ ಸ್ಥಾನಕ್ಕೆ ಬಂದಿದ್ದಾರೆ. ಅಮೆರಿಕ ಶೇರುಮಾರುಕಟ್ಟೆಯಲ್ಲಿ ಫೇಸ್​ಬುಕ್ ಶೇರು 5 ಪರ್ಸೆಂಟ್​​ನಷ್ಟು ಇಳಿಕೆ ಕಂಡಿದೆ.

-masthmagaa.com

Contact Us for Advertisement

Leave a Reply