ಡಿಕೆಶಿಗೆ ಸಂಕಷ್ಟದ ಮೇಲೆ ಸಂಕಷ್ಟ..! ತಾಯಿ, ಪತ್ನಿಗೆ ಮತ್ತೆ ಇಡಿ ನೋಟಿಸ್​..!

ದೆಹಲಿ: 50 ದಿನಗಳ ಕಾಲ ಜೈಲಿನಲ್ಲಿದ್ದು ಹೇಗೋ ಕಷ್ಟಪಟ್ಟು ಜಾಮೀನು ಪಡೆದು ಹೊರಗೆ ಬಂದಿರೋ ಡಿಕೆಶಿಗೆ ಸಂಕಷ್ಟಗಳು ತಪ್ಪುತ್ತಿಲ್ಲ. ಈಗ ಪತ್ನಿ ಹಾಗೂ ತಾಯಿಗೆ ಇಡಿ ಬಲೆ ಬೀಸಿದೆ. ಇಡಿ ನೀಡಿರುವ ಸಮನ್ಸ್ ವಿಚಾರವಾಗಿ ಇವತ್ತು ದೆಹಲಿ ಹೈಕೋರ್ಟ್​​ನಲ್ಲಿ ತೀರ್ಪು ಹೊರಬೀಳೋ ಸಾಧ್ಯತೆ ಇದೆ. ಮೊದಲಿಗೆ ಇಡಿ ಅಧಿಕಾರಿಗಳು ಅಕ್ಟೋಬರ್ 17ರಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಆದ್ರೆ ಸಮನ್ಸ್ ರದ್ದು ಮಾಡಬೇಕು. ಬೆಂಗಳೂರಿನಲ್ಲಿ ವಿಚಾರಣೆ ನಡೆಸಬೇಕು ಎಂದು ಡಿಕೆಶಿ ಪತ್ನಿ ಮತ್ತು ತಾಯಿ ಗೌರಮ್ಮ ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್​​ 7 ದಿನಗಳ ಕಾಲ ಸಮನ್ಸ್ ನೀಡದಂತೆ ಇಡಿ ಅಧಿಕಾರಿಗಳಿಗೆ ಸೂಚಿಸಿತ್ತು. ಈಗ 7 ದಿನಗಳು ಮುಗಿದ ಹಿನ್ನೆಲೆಯಲ್ಲಿ ಇಡಿ ಮತ್ತೆ ನೋಟಿಸ್ ಕೊಟ್ಟಿದೆ. ಜೊತೆಗೆ ಇವತ್ತು ಮತ್ತೆ ಕೋರ್ಟ್​​ನಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.

Contact Us for Advertisement

Leave a Reply