ಜಮೀರ್ ಮನೆ ಮೇಲೆ ED ದಾಳಿ ನಡೆಯೋಕೆ ಇದು ಕಾರಣವಿರಬಹುದಾ?

masthmagaa.com:

ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಬಿ.ಝಡ್​. ಜಮೀರ್ ಅಹ್ಮದ್​ ಖಾನ್​ ಅವರ ಮನೆ, ಕಚೇರಿಗಳ ಮೇಲೆ ಇವತ್ತು ಬೆಳ್ಳಂಬೆಳಗ್ಗೆ ಇಡಿ ಅಥವಾ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ರು. ಬಹುಕೋಟಿ ಹಗರಣವಾಗಿರೋ ಐ ಮಾನಿಟರಿ ಅಡ್ವೈಸರಿ ಅಥವಾ ಐಎಂಎ ಕೇಸ್​​ಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಜಮೀರ್ ಪಾರ್ಟ್​ನರ್ ಆಗಿರೋ ನ್ಯಾಷನಲ್​ ಟ್ರಾವೆಲ್ಸ್​ ಕಂಪನಿಯ ಕಚೇರಿಗಳ ಮೇಲೂ ದಾಳಿ ನಡೆಸಿ ದಾಖಲೆಗಳನ್ನ ಜಾಲಾಡಿದ್ದಾರೆ. ಅಂದ್ಹಾಗೆ ಬೆಂಗಳೂರಿನ ರಿಚ್​ಮಂಡ್​ ಟೌನ್​​ನಲ್ಲಿರೋ ತಮಗೆ ಸೇರಿದ ಪ್ರಾಪರ್ಟಿಯೊಂದನ್ನ ಸೇಲ್​ ಮಾಡೋ ಅಗ್ರೀಮೆಂಟ್​​ಗೆ ಸಂಬಂಧಿಸಿದಂತೆ ಜಮೀರ್ ಅಹ್ಮದ್​ ಖಾನ್ 2017ರಲ್ಲಿ​ ಐಎಂಎ ಕಂಪನಿಯಿಂದ 5 ಕೋಟಿ ರೂಪಾಯಿ ಅಡ್ವಾನ್ಸ್​ ಪಡೆದಿದ್ದರು. ಸ್ವತಃ ಜಮೀರ್ ಅಹ್ಮದ್​ ಖಾನ್ ಅವರೇ ಈ ವಿಚಾರವನ್ನ 2018ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​​ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆದಿರಬಹುದು ಎನ್ನಲಾಗ್ತಿದೆ. I ಈ ಮತ್ತೊಂದುಕಡೆ ಕಾಂಗ್ರೆಸ್​​ನ ಮತ್ತೊಬ್ಬ ನಾಯಕ ರೋಷನ್ ಬೇಗ್​ ಮನೆ ಮತ್ತು ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ರಾಜಕೀಯ ಪ್ರೇರಿತ ಅಂತ ಕಾಂಗ್ರೆಸ್ ಹೇಳಿದ್ರೆ, ಅಕ್ರಮ ನಡೆಸಿದೋರ ಮೇಲೆ ದಾಳಿ ನಡೆಯುತ್ತೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಹೇಳಿದೆ.

-masthmagaa.com

Contact Us for Advertisement

Leave a Reply