ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗ್ತಿರೋದು ಯಾಕೆ..?

masthmagaa.com:

ಸಾಸಿವೆ ಎಣ್ಣೆ ಸೇರಿ ಅಡುಗೆ ಎಣ್ಣೆ ಬೆಲೆ ಏರಿಕೆ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸರ್ಕಾರ ಈ ಎಣ್ಣೆಯಲ್ಲಿ ಅಡಲ್ಟರೇಶನ್ ಮೇಲೆ ನಿರ್ಬಂಧ ಹೇರಿದ್ದೀವಿ. ಅಂದ್ರೆ ಪ್ಯೂರ್ ಎಣ್ಣೆ ಬಿಟ್ಟು ಬೇರೇನನ್ನೂ ಬೆರೆಸೋ ಹಾಗಿಲ್ಲ ಈಗ. ಇದರಿಂದ ಗ್ರಾಹಕರಿಗೂ ಶುದ್ಧ ಎಣ್ಣೆ ಸಿಗುತ್ತೆ. ಜೊತೆಗೆ ರೈತರಿಗೂ ಒಳ್ಳೆ ಬೆಲೆ ಸಿಗುತ್ತೆ ಅಂತ ಅವ್ರು ಹೇಳಿದ್ದಾರೆ. ಸಚಿವರು ಏನೇ ಹೇಳಲಿ, ಸನ್ ಫ್ಲವರ್ ಆಯಿಲ್, ರೈ ಬ್ರಾನ್ ಆಯಿಲ್ ಸೇರಿದಂತೆ ಅಡುಗೆ ಎಣ್ಣೆ ರೇಟು ಕೈ ಸುಡೋಕೆ ಈಗ ಕುದಿಬೇಕು ಅಂತಿಲ್ಲ. ಹಾಗೇ ಪ್ಯಾಕೆಟ್ ಮುಟ್ಟಿದ್ರೂ ಸುಡುತ್ತೆ ಆ ಥರ ಆಗಿದೆ. ಲೀಟರ್ ಗೆ 170 ರಿಂದ 190ರ ತನಕ ಆಗಿದೆ.

-masthmagaa.com

Contact Us for Advertisement

Leave a Reply