ಚುನಾವನಾ ಫಲಿತಾಂಶದ ದಿನ ಸಂಭ್ರಮಾಚರಣೆ ಮಾಡಂಗಿಲ್ಲ!

masthmagaa.com:

ಚುನಾವಣಾ ಫಲಿತಾಂಶ ಬಂದಾಗ ಅಥವಾ ಬರುವ ಮುನ್ನ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡುವಂತಿಲ್ಲ ಅಂತ ಚುನಾವಣಾ ಆಯೋಗ ತಿಳಿಸಿದೆ. 4 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಹಲವು ಉಪಚುನಾವಣೆಗಳ ಫಲಿತಾಂಶ ಮೇ 2ರಂದು ಹೊರಬೀಳಲಿದೆ. ಮಾರ್ಚ್​ 27ರಿಂದ ಶುರುವಾಗಿರೋ ಮತದಾನ ಏಪ್ರಿಲ್ 29ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರೋ 8ನೇ ಹಂತದ ಮತದಾನದೊಂದಿಗೆ ಅಂತ್ಯವಾಗಲಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶದ ದಿನಕ್ಕೆ ಒಂದಷ್ಟು ರೂಲ್ಸ್ ಮಾಡಿದೆ ಚುನಾವಣಾ ಆಯೋಗ.. ಫಲಿತಾಂಶ ಪ್ರಕಟವಾದಾಗ ಅಭ್ಯರ್ಥಿಯ ಜೊತೆ ಕೇವಲ 2 ಮಾತ್ರವೇ ಇರಬಹುದು. ಅದಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ.. ಮೆರವಣಿಗೆ ಮಾಡುವಂತಿಲ್ಲ ಅಂತ ಹೇಳಿದೆ. ನಿನ್ನೆಯಷ್ಟೇ ಚುನಾವಣಾ ಆಯೋಗದ ವಿರುದ್ಧ ಕೆಂಡಕಾರಿದ್ದ ಮದ್ರಾಸ್ ಹೈಕೋರ್ಟ್​​, ಎಲ್ಲಾ ಕೊರೋನಾ ಸಾವುಗಳಿಗೆ ನೀವೇ ಕಾರಣ.. ಅಷ್ಟು ದೊಡ್ಡ ದೊಡ್ಡ ರ್ಯಾಲಿಗಳು ನಡೆಯೋವಾಗ ನೀವೇನು ಬೇರೆ ಗ್ರಹದಲ್ಲಿದ್ರಾ ಅಂತ ಪ್ರಶ್ನಿಸಿತ್ತು. ಜೊತೆಗೆ ಮೇ 2ರ ಫಲಿತಾಂಶದ ದಿನಕ್ಕೆ ಏನೆಲ್ಲಾ ಪ್ಲಾನ್ ಮಾಡ್ಕೊಂಡಿದ್ದೀರಿ..? ಒಂದ್ವೇಳೆ ಪ್ಲಾನ್ ಏನೂ ಮಾಡಿಲ್ಲ ಅಂತಾದ್ರೆ ಮತ ಎಣಿಕೆಯನ್ನೇ ನಿಲ್ಲಿಸಿ ಅಂತ ಸೂಚಿಸಿತ್ತು. ಅದ್ರ ಬೆನ್ನಲ್ಲೇ ಕೆಲವೊಂದು ನಿಯಮ ಸೂಚಿಸಿದೆ ಕೇಂದ್ರ ಚುನಾವಣಾ ಆಯೋಗ..

-masthmagaa.com

Contact Us for Advertisement

Leave a Reply