ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಕಳಿಸಿದ ಚುನಾವಣಾ ಆಯೋಗ! ಯಾಕೆ?

masthmagaa.com:

ನೀತಿ ಸಂಹಿತೆ ಉಲ್ಲಂಘಿಸಿರೋ ಕಾರಣ ಭಾರತದ ಚುನಾವಣಾ ಆಯೋಗ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಿದೆ. ಹೌದು ಕರ್ನಾಟಕದಲ್ಲಿ ಚುನಾವಣೆ ಇಲ್ಲ ಹೀಗಿದ್ರು, ಸಿದ್ದು ಸರ್ಕಾರಕ್ಕೆ ನೋಟಿಸ್‌ ಬಂದಿದೆ. ಕಾರಣ ರಾಜ್ಯ ಸರ್ಕಾರ ಮಾಡಿದ ಘನಂದಾರಿ ಕೆಲಸ. ಕರ್ನಾಟಕ ಸಾಲದು ಅಂತ ಕಾಂಗ್ರೆಸ್‌ ಸರ್ಕಾರ ತನ್ನ ಗ್ಯಾರಂಟಿ ಮಹಿಮೆಗಳನ್ನ ತೆಲಂಗಾಣದಲ್ಲೂ ಸಾರೋಕೆ ಅಲ್ಲಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ತೆಲುಗು ಪತ್ರಿಕೆಗಳಲೆಲ್ಲಾ ಗ್ಯಾರಂಟಿ ಯೋಜನೆಗಳು ವಿಜೃಂಭಿಸಿವೆ. ಆದ್ರೆ ಅಲ್ಲಿನ ನೀತಿ ಸಂಹಿತೆ ಇರೋದ್ರಿಂದ ಈ ವಿಚಾರವನ್ನ ಅಲ್ಲಿನ ಬಿಆರ್‌ಎಸ್‌ ಹಾಗು ಬಿಜೆಪಿ ಪಕ್ಷಗಳು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದು, ಆಯೋಗ ಕರ್ನಾಟಕ ಸರ್ಕಾರಕ್ಕೆ ಬರೆ ಹಾಕಿದೆ. ನೀತಿ ಸಂಹಿತೆ ಉಲ್ಲಂಘನೆ ಮಾಡೋಕೆ ಕಾರಣವೇನು ಅಂತ ನೋಟಿಸ್‌ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಡಿಸಿಎಂ ಡಿಕೆ ಶಿವಕುಮಾರ್‌, ತೆಲಂಗಾಣದಲ್ಲಿ ನಮ್ಮ ಜಾಹೀರಾತಿನಲ್ಲಿ ನಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದೇವೆಯೇ ಹೊರತು ಮತಯಾಚನೆ ಮಾಡಿಲ್ಲ. ಹೀಗಾಗಿ ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply