ಮನುಷ್ಯರ ಧಾರ್ಮಿಕ ಅಂಧಕಾರಕ್ಕೆ ಬಲಿಯಾಯ್ತು ಆನೆ..!

ಶ್ರೀಲಂಕಾದಲ್ಲಿ ಧಾರ್ಮಿಕ ಮೆರವಣಿಗೆಗಾಗಿ ಕಿಲೋಮೀಟರ್‍ಗಟ್ಟಲೆ ನಡೆದಿದ್ದ ಆನೆ ಕೊನೆಗೂ ಸಾವನ್ನಪ್ಪಿದೆ. ಕಳೆದ ತಿಂಗಳು ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ಬೌದ್ಧ ಧರ್ಮೀಯರ ವಾರ್ಷಿಕ ಹಬ್ಬದ ಮೆರವಣಿಗೆಯಲ್ಲಿ ಆನಬೆಯನ್ನು ನಡೆಸಲಾಗಿತ್ತು. ಇದರಿಂದ 70 ವರ್ಷದ ತಿಕಿರಿ ಆನೆ ಅಸ್ವಸ್ಥಗೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿಯಾಗಿತ್ತು. ಅಲ್ಲದೆ ಈ ಕೃತ್ಯವನ್ನು ಪ್ರಾಣಿ ಸಂಘಗಳು ತೀವ್ರವಾಗಿ ಖಂಡಿಸಿದ್ದವು. ಅಲ್ಲದೆ ಸರ್ಕಾರ ತನಿಖೆಗೂ ಆದೇಶ ನೀಡಿತ್ತು. ಆದ್ರೆ ಇಷ್ಟು ದಿನ ಅನಾರೋಗ್ಯದಿಂದ ಬಳಲಿದ ತಿಕಿರಿ ಕೊನೆಗೂ ಕೊನೆಯುಸಿರೆಳೆದಿದೆ.

Contact Us for Advertisement

Leave a Reply