‘ಎಲ್ಲಿ ರಾಮನೋ ಅಲ್ಲಿ ಹನುಮನು’: ಆದಿಪುರುಷ್ ಸಿನಿಮಾ ತಂಡದಿಂದ ಹೊಸ ಪ್ರಚಾರ ತಂತ್ರ ಶುರು!

masthmagaa.com:

ಆದಿಪುರುಷ್‌ ಚಿತ್ರಕ್ಕೆ ಅಭಿಮಾನಿಗಳು ಕಾಯ್ತಾ ಇದಾರೆ. ಜೂನ್‌ 16ಕ್ಕೆ ಈ ಚಿತ್ರ ರಿಲೀಸ್‌ ಆಗೋಕೆ ರೆಡಿಯಾಗಿ ನಿಂತಿದೆ. ಇನ್ನೂ ಈ ಚಿತ್ರದಲ್ಲಿ ಎಲ್ಲರಿಗೂ ಗೊತ್ತಿರೋ ಹಾಗೇ ಪ್ರಭಾಸ್‌ ರಾಮನ ಪಾತ್ರದಲ್ಲಿ, ಕೃತಿ ಸನೋನ್‌ ಸೀತೆಯ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸ್ತಾ ಇದಾರೆ. ಚಿತ್ರ ರಿಲೀಸ್‌ ಆದಾಗ ಪ್ರತಿಯೊಂದು ಥೇಟರ್‌ನಲ್ಲೂ ಒಂದು ಸೀಟ್‌ನ್ನ ಖಾಲಿ ಇಡಬೇಕು ಅಂತ ಚಿತ್ರತಂಡ ತೀರ್ಮಾನ ಮಾಡಿದೆ.

ಎಲ್ಲಿ ರಾಮ ಇರ್ತಾನೋ, ಅಲ್ಲಿ ಹನುಮ ಕೂಡ ಇರ್ತಾನೆ ಅನ್ನೋದು ರಾಮಾಯಾಣದ ಕಾಲದಿಂದಲೂ ಬಂದಂತ ಮಾತು. ಈ ಚಿತ್ರದಲ್ಲೂ ಕೂಡ ರಾಮ ಸೀತೆ ಇರೋದ್ರಿಂದ ಆಂಜನೇಯ ಕೂಡ ಅಲ್ಲೇ ಇರ್ತಾನೆ ಅನ್ನೋದು ಚಿತ್ರತಂಡದ ನಂಬಿಕೆ. ಹಾಗಾಗಿ ಒಂದು ಸೀಟ್‌ನ್ನ ಆಂಜನೇಯನಿಗೋಸ್ಕರ ಮೀಸಲಿಡಲಾಗತ್ತೆ ಅಂತ ಚಿತ್ರತಂಡ ಹೇಳಿದೆ.

‘ಆದಿಪುರುಷ್​’ ಚಿತ್ರಕ್ಕೆ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುತ್ತಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಎಲ್ಲ ರಾಜ್ಯಗಳಲ್ಲೂ ಉತ್ತಮ ಓಪನಿಂಗ್​ ಪಡೆದುಕೊಳ್ಳುವ ನಿರೀಕ್ಷೆ ಇದೆ. ಹಿಂದಿ ಪ್ರೇಕ್ಷಕರಲ್ಲೂ ಈ ಸಿನಿಮಾ ಬಗ್ಗೆ ಹೈಪ್​ ಕ್ರಿಯೇಟ್​ ಆಗಿದೆ.

-masthmagaa.com

Contact Us for Advertisement

Leave a Reply