ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡ್ತಿನಿ‌ ಅಂದ ಎಲಾನ್‌ ಮಸ್ಕ್!

masthmagaa.com:

ಏಪ್ರಿಲ್‌ 22ರಂದು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವ್ರನ್ನ ಮೀಟ್‌ ಮಾಡ್ತಿನಿ ಅಂತೇಳಿದ್ದ ಟೆಸ್ಲಾ ದಿಗ್ಗಜ ಎಲಾನ್‌ ಮಸ್ಕ್‌ ತಮ್ಮ ಟೂರ್‌ನ್ನ ಡಿಲೇ ಮಾಡೊದಾಗಿ ಹೇಳಿದ್ದಾರೆ. ಟೆಸ್ಲಾ ಕಂಪನಿಯಲ್ಲಿ ಹೆಚ್ಚಿನ ಕೆಲ್ಸಗಳು ಇರೊದ್ರಿಂದ ದುರದೃಷ್ಟವಶಾತ್ ಸದ್ಯ ಭಾರತಕ್ಕೆ ಬರೋಕೆ ಸಾಧ್ಯ ಆಗ್ತಿಲ್ಲ. ಆದ್ರೆ ಈ ವರ್ಷದ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲು ಎದುರು ನೋಡ್ತಿದ್ದೇನೆ ಅಂತ ಮಸ್ಕ್ ಹೇಳಿದ್ದಾರೆ. ಅಂದ್ಹಾಗೆ ಭಾರತದಲ್ಲಿ ಮಸ್ಕ್‌ ಇಲೆಕ್ಟ್ರಿಕ್‌ ಕಾರು ತಯಾರಿಕಾ ಘಟಕಕ್ಕಾಗಿ 2ರಿಂದ 3 ಬಿಲಿಯನ್‌ ಡಾಲರ್‌ ಅಂದ್ರೆ 16,600 ರಿಂದ 24,900 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಮಾಡಲಿದ್ದಾರೆ ಎನ್ನಲಾಗಿತ್ತು. ಅದ್ರ ಭಾಗವಾಗಿ ಭಾರತಕ್ಕೆ ಭೇಟಿ ನೀಡ್ತಾರೆ ಅಂತೇಳಲಾಗಿತ್ತು. ಇದೀಗ ತಮ್ಮ ಪ್ರವಾಸದಲ್ಲಿ ವಿಳಂಬ ಮಾಡೊದಾಗಿ ಮಸ್ಕ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply