2001 ನ್ಯೂಯಾರ್ಕ್‌ ದಾಳಿಗಿಂತಲೂ ಕೆಟ್ಟದ್ದು ಬೈಡನ್‌ರ ವಲಸೆ ನೀತಿ!

masthmagaa.com:

ಅಮೆರಿಕದಲ್ಲಿನ ವಲಸೆ ನೀತಿ ಕುರಿತಂತೆ ಅಧ್ಯಕ್ಷ ಜೊ ಬೈಡನ್‌ರ ಸರ್ಕಾರ ಮತದಾರರನ್ನ ಆಮದು ಮಡ್ಕೊಳ್ತಿದೆ ಅಂತ ಟೆಸ್ಲಾ ದಿಗ್ಗಜ ಎಲಾನ್‌ ಮಸ್ಕ್‌ ದೊಡ್ಡ ಆರೋಪ ಮಾಡಿದ್ದಾರೆ. ಅಮೆರಿಕದಲ್ಲಿ ಬೈಡನ್‌ ಸರ್ಕಾರ ಕಳೆದ ವರ್ಷದಲ್ಲಿ ರಾತ್ರಿ ವೇಳೆಯ ವಿಮಾನಗಳ ಮೂಲಕ 3 ಲಕ್ಷ 20 ಸಾವಿರ ವಲಸಿಗರನ್ನ ದೇಶಕ್ಕೆ ಕರ್ಕೊಂಡು ಬಂದಿದೆ ಅಂತ ಮಸ್ಕ್‌ ಹೇಳಿದ್ದಾರೆ. ದೇಶದ ಗಡಿಯಾಚೆ ಹೋಗೊರ ಸಂಖ್ಯೆಯನ್ನ ಕಡಿಮೆ ಮಾಡಲು ಮುಂದಾಗಿರೋ ಬೈಡನ್‌ ಸರ್ಕಾರ ಮತದಾರರನ್ನ ಆಮದು ಮಾಡ್ಕೊಂಡು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡಿದೆ ಅಂತ ಮಸ್ಕ್‌ ಹೇಳಿದ್ದಾರೆ. ಅಲ್ದೇ ಬೈಡನ್‌ ಸರ್ಕಾರದ ಈ ಕ್ರಮ 2001 ಸಪ್ಟೆಂಬರ್‌ನ ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ದಾಳಿಗಿಂತಲೂ ಕೆಟ್ಟದಾಗಿದೆ ಅಂತ ಮಸ್ಕ್‌ ಕಿಡಿಕಾರಿದ್ದಾರೆ. ಜೊತೆಗೆ ವಲಸಿಗರನ್ನ ದೇಶಕ್ಕೆ ಕರೆಸಿಕೊಳ್ಳಲು ಅಮೆರಿಕದ ತೆರಿಗೆ ಹಣವನ್ನ ಬೈಡನ್‌ ಸರ್ಕಾರ ಬಳಸಿದೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply