ತನ್ನ ಬಳಿ ಸ್ವಂತ ಮನೆ ಇಲ್ಲ ಎಂದ ಜಗತ್ತಿನ ನಂ.1 ಶ್ರೀಮಂತ‌ ಎಲಾನ್‌ ಮಸ್ಕ್‌!

masthmagaa.com:

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಕಂಪನಿ ಒಡೆಯ, ಬಿಲೆನಿಯರ್‌ ಎಲಾನ್‌ ಮಸ್ಕ್‌, ತಾನು ಸ್ವಂತ ಮನೆ ಹೊಂದಿಲ್ಲ ಸ್ನೇಹಿತರ ಎಕ್ಸ್ಟ್ರಾ ಬೆಡ್‌ರೂಮ್‌ನಲ್ಲೇ ಮಲಗ್ತೀನಿ ಅಂತ ಹೇಳಿದ್ದಾರೆ. ಟೆಡ್‌ನ ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರೋ ಅವ್ರು, ನನ್ನ ಹತ್ರ ಸದ್ಯಕ್ಕೆ ಸ್ವಂತ ಮನೆನೂ ಇಲ್ಲ, ಟೆಸ್ಲಾದ ಹೆಚ್ಚು ಇಂಜಿನಿಯರ್‌ಗಳು ಇರೋ ಸ್ಯಾನ್‌ಫ್ರಾನ್ಸಿಸ್ಕೊಗೆ ಹೋದ್ರೆ ಸ್ನೇಹಿತರ ಮನೆಗಳಲ್ಲಿರೊ ಎಕ್ಸ್ಟ್ರಾ ಬೆಡ್‌ರೂಮ್‌ನಲ್ಲಿ ಇರ್ತೀನಿ ಅಂತ ಹೇಳಿದ್ದಾರೆ. ಬಿಲೇನಿಯರ್‌ಗಳು ಖರ್ಚು ಮಾಡೋದ್ರ ಬಗ್ಗೆ ಪ್ರಶ್ನಿಸಿದಾಗ ಮಸ್ಕ್‌ ಈ ವಿಚಾರ ಸ್ಪಷ್ಟಪಡಿಸಿದ್ದು, ನನ್ನ ಹತ್ರ ಯಾವುದೆ ವಿಹಾರ ನೌಕೆಯಿಲ್ಲ, ನಾನು ವೆಕೇಷನ್‌ಗಳನ್ನ ತಗೊಳಲ್ಲ. ನನ್ನೊಬ್ಬನಿಗೆ ಬಿಲಿಯನ್‌ಗಟ್ಟಲೆ ಖರ್ಚು ಮಾಡಿದ್ರೆ ಸಮಸ್ಯೆಯಾಗುತ್ತೆ ಅಂತ ಹೇಳಿದ್ದಾರೆ.

masthmagaa.com

Contact Us for Advertisement

Leave a Reply