ಭಾರತಕ್ಕೆ ಬರದೇ ಚೀನಾಗೆ ಹೋಗಿದ್ದ ಮಸ್ ಭೇಟಿ ರಹಸ್ಯ ಬಯಲು!

masthmagaa.com:

ಭಾರತ ಭೇಟಿಗೆ ಚಕ್ಕರ್‌ ಹೇಳಿ ಶತ್ರು ರಾಷ್ಟ್ರ ಚೀನಾಗೆ ಹೋಗಿದ್ದ ಎಲಾನ್‌ ಮಸ್ಕ್‌ ನಡೆ ಹಿಂದೆ ಈಗ ಸ್ಟ್ರಟಜಿಕ್‌ ಹೆಜ್ಜೆ ಇತ್ತು ಅನ್ನೋದು ಗೊತ್ತಾಗಿದೆ. ಯಾಕಂದ್ರೆ ಮಸ್ಕ್‌ ಭೇಟಿ ವೇಳೆ ಟೆಸ್ಲಾ ಚೀನಾದಲ್ಲಿ ಇಂಪಾರ್ಟೆಂಟ್‌ ಸೆಕ್ಯುರಿಟಿ ಟೆಸ್ಟ್‌ ಒಂದನ್ನ ಪಾಸ್‌ ಆಗಿದೆ. ಚೀನಾದ ಟೆಸ್ಲಾ ಕಾರುಗಳಲ್ಲಿ ಡ್ರೈವರ್‌ ಅಸಿಸ್ಟನ್ಸ್‌ ಸಾಫ್ಟ್‌ವೇರ್‌ ಅಳವಡಿಸೋಕೆ ಟೆಸ್ಲಾ ಒಂದಿಷ್ಟು ಟೆಸ್ಟ್‌ಗಳನ್ನ ಪಾಸಾಗ್ಬೇಕಿತ್ತು. ಯಾಕಂದ್ರೆ ಟೆಸ್ಲಾ ಅಮೆರಿಕ ಕಂಪನಿ ಸಹಜವಾಗಿ ಚೀನಾಗೆ ಡೇಟಾ ಕನ್ಸರ್ನ್ಸ್‌ ಇರುತ್ತೆ. ಆದ್ರೆ ಮಸ್ಕ್‌ ಈ ಭೇಟಿ ವೇಳೆ ಆ ಕಳವಳಗಳನ್ನ ಕ್ಲಿಯರ್‌ ಮಾಡಿದ್ದಾರೆ. ಟೆಸ್ಲಾಗೆ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಸಿಕ್ಕಿದೆ. ಹೀಗಾಗಿ ಟೆಸ್ಲಾ ಈಗ ಚೀನಾದಲ್ಲಿ ಕೂಡ ಸೆಲ್ಫ್‌ ಡ್ರೈವಿಂಗ್‌ ಕಾರುಗಳನ್ನ ಬಿಡ್ಬಹುದು. ಈ ಮೂಲಕ ಚೀನಾದಲ್ಲಿ ಕುಸೀತಾ ಇದ್ದ ಟೆಸ್ಲಾ ಮಾರ್ಕೆಟ್‌ಗೆ ಒಂದಿಷ್ಟು ಬೂಸ್ಟ್‌ ನೀಡಿದಂತೆ ಆಗಿದೆ.

-masthmagaa.com

Contact Us for Advertisement

Leave a Reply