ಎಲಾನ್ ಮಸ್ಕ್ ಇಂಟರ್​ನೆಟ್ ಕ್ರಾಂತಿ! ಮುಂದೇನಾಗಬಹುದು?

masthmagaa.com:

ಈಗಾಗಲೇ ಎಲೆಕ್ಟ್ರಾನಿಕ್ ಕಾರುಗಳ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರೋ ಕ್ರೇಜಿ ಉದ್ಯಮಿ ಎಲಾನ್ ಮಸ್ಕ್​ ಇಂಟರ್​ನೆಟ್ ಕ್ಷೇತ್ರದಲ್ಲೂ ಕ್ರಾಂತಿ ಮಾಡೋ ಪ್ರಯತ್ನದಲ್ಲಿದ್ದಾರೆ. ಇಂಟರ್​​ನೆಟ್ ಸೇವೆ ನೀಡುವ ಸ್ಟಾರ್ ಲಿಂಕ್ ಯೋಜನೆಗೆ 30 ಬಿಲಿಯನ್ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ ನೋಡೋದಾದ್ರೆ 2.2 ಲಕ್ಷ ಕೋಟಿಯಷ್ಟು ಬಂಡವಾಳ ಹೂಡುವ ಪ್ಲಾನ್ ಇದೆ ಅಂತ ಎಲಾನ್ ಮಸ್ಕ್ ಹೇಳಿದ್ದಾರೆ. ಸ್ಟಾರ್ ಲಿಂಕ್ ಅನ್ನೋದು ಸೆಟಲೈಟ್ ಇಂಟರ್​ನೆಟ್ ಸರ್ವೀಸ್​​.. ಭೂಮಿಗೆ ಹತ್ತಿರವಾದ ಅಂದ್ರೆ ಕೆಳ ಕಕ್ಷೆಯಲ್ಲಿ ಸಾವಿರಾರು ಉಪಗ್ರಹಗಳನ್ನು ನಿಯೋಜಿಸಿ, ಕನೆಕ್ಟಿವಿಟಿ ಕಡಿಮೆ ಇರುವ ಜಾಗಗಳಿಗೂ ಹೈ ಸ್ಪೀಡ್ ಇಂಟರ್​ನೆಟ್ ನೀಡುವ ಒಂದು ಯೋಜನೆ. ಈಗಾಗಲೇ 1500 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದ್ದು, ಆಗಸ್ಟ್​​ ವೇಳೆಗೆ ಇಡೀ ಭೂಮಿಗೆ ಅಂದ್ರೆ ದಕ್ಷಿಣ ಮತ್ತು ಉತ್ತರ ಧ್ರುವ ಬಿಟ್ಟು ಉಳಿದೆಲ್ಲಾ ಭಾಗಗಳಿಗೆ ಇಂಟರ್​ನೆಟ್ ಕನೆಕ್ಟಿವಿಟಿ ಸೌಲಭ್ಯ ಒದಗಿಸುವ ಸಾಧ್ಯತೆ ಇದೆ ಅಂತ ಎಲಾನ್ ಮಸ್ಕ್ ಹೇಳಿದ್ದಾರೆ. ಬಾರ್ಸೆಲೋನಾದಲ್ಲಿ ಟೆಲಿಕಾಂ ಇಂಡಸ್ಟ್ರಿಯ ಮೊಬೈಲ್ ವರ್ಲ್ಡ್​​ ಕಾಂಗ್ರೆಸ್ ಅನ್ನೋ ಒಂದು ಕಾನ್ಫರೆನ್ಸ್​​ನಲ್ಲಿ, ವಿಡಿಯೋ ಲಿಂಕ್ ಮೂಲಕ ಭಾಗಿಯಾದ ಎಲಾನ್ ಮಸ್ಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ನಾವು 69 ಸಾವಿರಕ್ಕೂ ಹೆಚ್ಚು ಆಕ್ಟೀವ್ ಯೂಸರ್​ಗಳನ್ನು ಹೊಂದಿದ್ದು, ಮುಂದಿನ 12 ತಿಂಗಳಲ್ಲಿ ಅದು 5 ಲಕ್ಷದ ಗಡಿ ದಾಟುತ್ತೆ ಅನ್ನೋ ನಂಬಿಕೆ ನಮಗಿದೆ. ಸ್ಟಾರ್​ಲಿಂಕ್ ತನ್ನ ಟರ್ಮಿನಲ್​​ಗಳನ್ನು 500 ಡಾಲರ್ ಅಂದ್ರೆ 37 ಸಾವಿರ ರೂಪಾಯಿಗೆ ಮಾರಾಟ ಮಾಡ್ತಿದೆ. ಆದ್ರೆ ಅದರ ನಿರ್ಮಾಣಕ್ಕೆ 1000 ಡಾಲರ್ ಖರ್ಚಾಗುತ್ತಿದೆ. ಹೀಗಾಗಿ ಟರ್ಮಿನಲ್ ನಿರ್ಮಾಣ ವೆಚ್ಚ ಕಡಿಮೆ ಮಾಡಿ, 220ರಿಂದ 250 ಡಾಲರ್​​ಗೆ ಇಳಿಸೋ ಬಗ್ಗೆ ಕೂಡಾ ಯೋಚಿಸ್ತಿದ್ದೇವೆ ಅಂತ ಮಸ್ಕ್ ಹೇಳಿದ್ದಾರೆ. ಜೊತೆಗೆ ಈಗಾಗಲೇ 2 ಪ್ರಮುಖ ದೇಶಗಳ ಟೆಲಿಕಾಂ ಆಪರೇಟರ್​ಗಳ ಜೊತೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದೀನಿ ಅಂತ ಹೇಳಿದ್ದಾರೆ. ಆದ್ರೆ ಅದು ಯಾವ ದೇಶಗಳು ಅಂತ ಮಾತ್ರ ಹೇಳಿಲ್ಲ.. ಅತಿ ಹೆಚ್ಚು ಇಂಟರ್​​ನೆಟ್ ಬಳಕೆದಾರರ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ರೆ, ಭಾರತ 2ನೇ ಸ್ಥಾನದಲ್ಲಿದೆ. 3ನೇ ಪ್ಲೇಸ್​ನಲ್ಲಿ ಅಮೆರಿಕ ಇದೆ.

-masthmagaa.com

Contact Us for Advertisement

Leave a Reply