ಭಾರತದಲ್ಲಿ ಟೆಸ್ಲಾ ಕಾರ್ಯಾರಂಭಕ್ಕೆ ಸಿದ್ಧತೆ!

masthmagaa.com:

ಈಗಾಗಲೇ ಭಾರತ ಮಾರುಕಟ್ಟೆ ಪ್ರವೇಶಿಸೋದಾಗಿ ಘೋಷಿಸಿರೋ ಎಲಾನ್ ಮಸ್ಕ್​ರ ಟೆಸ್ಲಾ, ಈ ಸಂಬಂಧ ಒಂದೊಂದೇ ಹೆಜ್ಜೆ ಇಡೋಕೆ ಶುರುಮಾಡಿದೆ. ಭಾರತದಲ್ಲಿ ಕಂಪನಿಯ ಮ್ಯಾನೇಜ್ಮೆಂಟ್ ಮತ್ತು ನಾಯಕತ್ವದ ಸಂಬಂಧ ನೇಮಕಾತಿ ಶುರು ಮಾಡ್ಕೊಂಡಿದೆ. ಕ್ಯಾಲಿಫೋರ್ನಿಯಾ ಮೂಲದ ಈ ಕಂಪನಿ ಭಾರತದ ತನ್ನ ವಿಭಾಗಕ್ಕೆ ಪ್ರಶಾಂತ್ ಆರ್ ಮೆನನ್ ಎಂಬುವರನ್ನು ಡೈರೆಕ್ಟರ್ ಆಗಿ ನೇಮಿಸಿದೆ. ಅಂದಹಾಗೆ ಪ್ರಶಾಂತ್​ ಕಳೆದ 4 ವರ್ಷಗಳಿಂದ ಟೆಸ್ಲಾ ಸಂಸ್ಥೆಗಾಗಿ ಕೆಲಸ ಮಾಡ್ತಿದ್ದಾರೆ. ಜೊತೆಗೆ ಹೆಡ್ ಆಫ್ ಸೇಲ್ಸ್​​ & ಮಾರ್ಕೆಟಿಂಗ್​​, ಹೆಡ್ ಆಫ್ ಹ್ಯೂಮನ್ ರಿಸರ್ಚ್​​ ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ತಿದೆ. ಈ ವರ್ಷದ ಆರಂಭದಿಂದಲೂ ಟೆಸ್ಲಾ ತನ್ನ ಶೋರೂಂ, ಆರ್​ & ಡಿ ಸೆಂಟರ್​, ಕಚೇರಿ, ಫ್ಯಾಕ್ಟರಿಗಾಗಿ ಭಾರತದಲ್ಲಿ ಜಾಗಕ್ಕೆ ಹುಡುಕಾಟ ನಡೆಸ್ತಲೇ ಇದೆ. ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್​ & ಎನರ್ಜಿ ಪ್ರೈವೇಟ್ ಲಿಮಿಟೆಡ್ ಅನ್ನೋ ಹೆಸರಲ್ಲಿ ಕಂಪನಿ ಕೂಡ ಶುರು ಮಾಡಿತ್ತು.

-masthmagaa.com

Contact Us for Advertisement

Leave a Reply