ತಮಿಳುನಾಡಲ್ಲಿ ಸೆರೆ ಸಿಕ್ಕ ನರಭಕ್ಷಕ ಹುಲಿ!

masthmagaa.com:

ತಮಿಳುನಾಡಿನಲ್ಲಿ ಇಷ್ಟು ದಿನ ತಲೆ ಮರೆಸಿಕೊಂಡು ಓಡಾಡ್ತಿದ್ದ ನರಭಕ್ಷಕ ಹುಲಿ ಅರಣ್ಯ ಇಲಾಖೆ ಬಲೆಗೆ ಬಿದ್ದಿದೆ. ನೀಲಗಿರಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಈ ಹುಲಿ ನಾಲ್ವರನ್ನು ಬಲಿ ಪಡೆದುಕೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಹುಲಿ ಹಿಡಿಯೋಕೆ ಪ್ರಯತ್ನಿಸುತ್ತಲೇ ಇದ್ರು. ಈ ನಡುವೆ ಮದ್ರಾಸ್ ಹೈಕೋರ್ಟ್​ ಕೂಡ ಹುಲಿಯನ್ನು ಕೊಲ್ಲಬಾರದು. ಜೀವಂತವಾಗಿ ಸೆರೆ ಹಿಡಿಯಬೇಕು ಅಂತ ಸೂಚಿಸಿತ್ತು. ಅದರಂತೆ ನೂರಾರು ಅರಣ್ಯ ಸಿಬ್ಬಂದಿ ಮತ್ತು ಪಳಗಿಸಿದ ಆನೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ವು. ಕೊನೆಗೂ ಈಗ ಜೀವಂತವಾಗಿ ಹುಲಿಯನ್ನು ಬೋನಿಗೆ ಬೀಳಿಸಲಾಗಿದೆ.

-masthmagaa.com

Contact Us for Advertisement

Leave a Reply