ಅಕ್ರಮ ಹಣ ವರ್ಗಾವಣೆ ಕೇಸ್​​: ಮಾಜಿ ಮಂತ್ರಿ ಅನಿಲ್ ದೇಶ್​ಮುಖ್ ಅರೆಸ್ಟ್​

masthmagaa.com:

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಂದ್ರೆ ಜಾರಿ ನಿರ್ದೇಶನಾಲಯ ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್ ದೇಶ್​ಮುಖ್​​ರನ್ನು ಅರೆಸ್ಟ್ ಮಾಡಿದೆ. ನಿನ್ನೆ 12 ಗಂಟೆಗಳ ವಿಚಾರಣೆ ನಡೆಸಿದ್ದು, ಈ ವೇಳೆ ಅನಿಲ್ ದೇಶ್​ಮುಖ್ ಸರಿಯಾದ ರೀತಿಯಲ್ಲಿ ಸ್ಪಂಧಿಸಲಿಲ್ಲ ಅನ್ನೋ ಕಾರಣಕ್ಕೆ ರಾತ್ರಿ ಬಂಧಿಸಿದೆ. ಇವತ್ತು ಮುಂಬೈನ ಪಿಎಂಎಲ್​ಎ ಕೋರ್ಟ್​ ಮುಂದೆ ಹಾಜರುಪಡಿಸಲಾಯ್ತು. ವಿಚಾರಣೆ ನಡೆಸಿದ ಕೋರ್ಟ್​​ ನವೆಂಬರ್ 6ರವರೆಗೆ ಅನಿಲ್ ದೇಶ್​ಮುಖ್​​ರನ್ನು ಇಡಿ ಕಸ್ಟಡಿಗೆ ನೀಡಿದೆ. ಈ ಹಿಂದೆ ಇಡಿ ನೋಟಿಸ್​ ರದ್ದುಪಡಿಸಿ, ಬಂಧನದಿಂದ ರಕ್ಷಣೆ ಕೊಡಬೇಕು ಅಂತ ಬಾಂಬೆ ಹೈಕೋರ್ಟ್​​​​ಗೆ ಅನಿಲ್ ದೇಶ್​​ಮುಖ್ ಅರ್ಜಿ ಸಲ್ಲಿಸಿದ್ರು. ಆದ್ರೆ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತ್ತು. ಸಿಬಿಐ ದಾಖಲಿಸಿರೋ ಎಫ್​ಐಆರ್ ಆಧಾರದ ಮೇಲೆ ಇಡಿ ಈ ತನಿಖೆ ನಡೆಸ್ತಿದೆ. ಅಂದಹಾಗೆ ಅನಿಲ್ ದೇಶ್​ಮುಖ್ ಗೃಹಸಚಿವರಾಗಿದ್ದಾಗ ಪೊಲೀಸರಿಗೆ 100 ಕೋಟಿ ರೂಪಾಯಿ ಕಲೆಕ್ಟ್ ಮಾಡಿಕೊಡುವಂತೆ ಟಾರ್ಗೆಟ್ ಕೊಟ್ಟಿದ್ರು ಅಂತ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಆರೋಪಿಸಿದ್ರು.

-masthmagaa.com

Contact Us for Advertisement

Leave a Reply