ಇಂಗ್ಲೆಂಡ್ ವಿರುದ್ಧ ಸೋಲು: ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಭಾರಿ ಕುಸಿತ

masthmagaa.com:

ಭಾರತ ಮತ್ತು ಇಂಗ್ಲೆಂಡ್​ ನಡುವೆ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್​ ಭರ್ಜರಿ 227 ರನ್​ಗಳ ಗೆಲುವು ದಾಖಲಿಸಿದೆ. ಗೆಲುವಿಗೆ 420 ರನ್ ಬೃಹತ್ ಟಾರ್ಗೆಟ್​ ಬೆನ್ನಟ್ಟಿದ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 192 ರನ್​ಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಳ್ತು. ಟೀಂ ಇಂಡಿಯಾ ಪರ ನಾಯಕ ವಿರಾಟ್​ ಕೊಹ್ಲಿ 72 ಮತ್ತು ಶುಬ್​ಮನ್​ ಗಿಲ್ 50 ರನ್ ಸಿಡಿಸಿದ್ರು. ಇಂಗ್ಲೆಂಡ್ ಪರ ಜಾಕ್ ಲೀಚ್​ 4 ಮತ್ತು ಜೇಮ್ಸ್ ಆಂಡರ್ಸರ್ 3 ವಿಕೆಟ್​ ಪಡೆದು ಮಿಂಚಿದ್ರು. ಈ ಗೆಲುವಿನೊಂದಿಗೆ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್ ತಂಡ 1-0 ಮುನ್ನಡೆ ಸಾಧಿಸಿದೆ. ಇಷ್ಟೇ ಅಲ್ಲ, ಈ ಭರ್ಜರಿ ಗೆಲುವಿನೊಂದಿಗೆ ಐಸಿಸಿ ವರ್ಲ್ಡ್​​ ಟೆಸ್ಟ್ ಚಾಂಪಿಯನ್​ಶಿಪ್​ನ ಪಾಯಿಂಟ್ಸ್ ಪಟ್ಟಿಯಲ್ಲಿ ಇಂಗ್ಲೆಂಡ್​ ಮೊದಲ ಸ್ಥಾನಕ್ಕೆ ಹೋಗಿದೆ. ಮೊದಲ ಸ್ಥಾನದಲ್ಲಿದ್ದ ಭಾರತ ಹೀನಾಯ ಸೋಲಿನೊಂದಿಗೆ ಮೊದಲ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದೆ. ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಉಳಿಯೋ ತಂಡ ಲಾರ್ಡ್ಸ್​​ನಲ್ಲಿ ಫೈನಲ್ ಪಂದ್ಯ ಆಡಲಿವೆ. ನ್ಯೂಜಿಲೆಂಡ್​ ಈಗಾಗಲೇ ಫೈನಲ್​ಗೆ ಕ್ವಾಲಿಫೈ ಆಗಿರೋದ್ರಿಂದ, ಮತ್ತೊಂದು ಸ್ಥಾನಕ್ಕಾಗಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಪೈಪೋಟಿ ಇದೆ.

ಸ್ಕೋರ್ ವಿವರ:

ಇಂಗ್ಲೆಂಡ್​ – 578 & 178

ಭಾರತ – 337 & 192

-masthmagaa.com

Contact Us for Advertisement

Leave a Reply