ಸಿಖ್​ ವಿರೋಧಿ ದಂಗೆಯ ಸಂತ್ರಸ್ತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ

masthmagaa.com:

1984ರಲ್ಲಿ ನಡೆದ ಸಿಖ್​ ವಿರೋಧಿ ದಂಗೆಯ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಲು 2014ರಲ್ಲಿ ಕೇಂದ್ರ ಸರ್ಕಾರ ಪುನರ್ವಸತಿ ಪ್ಯಾಕೇಜ್ ಅನ್ನ ಜಾರಿಗೆ ತಂದಿತ್ತು. ಅದಕ್ಕಾಗಿ 2021-22ರ ಬಜೆಟ್​​ನಲ್ಲಿ ನಾಲ್ಕೂವರೆ ಹಣವನ್ನ ಎತ್ತಿಡಲಾಗಿತ್ತು ಅಂತ ಕೇಂದ್ರ ಸರ್ಕಾರ ಲೋಕಸಭೆಗೆ ಇವತ್ತು ಮಾಹಿತಿ ನೀಡಿದೆ. ಸಿಖ್ ವಿರೋಧಿ ದಂಗೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮೂರೂವರೆ ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ಒಂದೂಕಾಲು ಲಕ್ಷ ರೂಪಾಯಿ ಪರಿಹಾರ ನೀಡುವ ಸ್ಕೀಂ ಇದಾಗಿದೆ. ಜೊತೆಗೆ ವಿಧವೆಯರು ಮತ್ತು ವಯಸ್ಸಾಗಿರೋ ಪೋಷಕರಿಗೆ ರಾಜ್ಯ ಸರ್ಕಾರಗಳು ತಿಂಗಳಿಗೆ ಎರಡೂವರೆ ಸಾವಿರ ರೂಪಾಯಿಯಂತೆ ಜೀವನ ಪರ್ಯಂತ ಪಿಂಚಣಿ ನೀಡುವ ಸ್ಕೀಂ ಕೂಡ ಇದು ಹೊಂದಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply