ಹಾಸನಾಂಬೆ ದರ್ಶನಕ್ಕೆ ಅವಕಾಶ! ನಾಳೆಯಿಂದ ದೇಗುಲ ಓಪನ್

masthmagaa.com:

ನಾಳೆಯಿಂದ ನವೆಂಬರ್‌ 6ರವರೆಗೆ ಹಾಸನಾಂಬೆ ದರ್ಶನಕ್ಕೆ ಷರತ್ತುಬದ್ಧ ಅವಕಾಶ ನೀಡಲಾಗಿದೆ. ಕಳೆದವರ್ಷ ಕೊರೋನಾ ಹಿನ್ನಲೆ ಭಕ್ತರಿಗೆ ದೇವಿದರ್ಶನಕ್ಕೆ ಅವಕಾಶವನ್ನ ಕೊಟ್ಟಿರಲಿಲ್ಲ. ಆದ್ರೆ ಈ ಬಾರಿಯು ಕೊರೋನಾ ಕಾರಣದಿಂದಾಗಿ ದೇವಿದರ್ಶನಕ್ಕೆ ಅವಕಾಶ ಕೊಡೋದಿಲ್ಲ ಅಂದಿದ್ರು. ಆದ್ರೆ ಅನೇಕ ಭಕ್ತ ಸಂಘಟನೆಗಳ ಪ್ರತಿಭಟನೆಯ ನಂತ್ರ ಇದೀಗ ಶರತ್ತು ಬದ್ದ ಅವಕಾಶ ನೀಡಲಾಗಿದೆ. ಇನ್ನು ಭಕ್ತರಿಗೆ ಎರಡು ಡೋಸ್‌ ಲಸಿಕೆ ಆಗಿರಬೇಕು, ಅದರ ಪ್ರಮಾಣ ಪತ್ರ ತೋರಿಸೋದು ಕಡ್ಡಾಯ. ದೇವಸ್ಥಾನದೊಳಗೆ 18 ವರ್ಷಕ್ಕಿಂತ ಕಮ್ಮಿ ವಯಸ್ಸಿನ ಹಾಗೆ ವಯಸ್ಸಾದವರು ದೇವಸ್ಥಾನಕ್ಕೆ ಬರದೆ ಆನ್‌ಲೈನ್‌ ಮೂಲಕ ದೇವಿ ದರ್ಶನ ಮಾಡುವಂತೆ ಕೇಳಿಕೊಂಡಿದ್ದಾರೆ. ದೇವಸ್ಥಾನ ಬಾಗಿಲು ತೆರೆಯುವ ಮೊದಲ ದಿನ ಹಾಗೆ ಕೊನೆಯ ದಿನ ಭಕ್ತರಿಗೆ ಪ್ರವೇಶ ಇಲ್ಲ. ಉಳಿದ ಏಳುದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 1 ಗಂಟೆವರೆಗೆ, ಮಧ್ಯಾಹ್ನ 3ರಿಂದ ರಾತ್ರಿ 8 ಗಂಟೆವರೆಗೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

-masthmagaa.com

Contact Us for Advertisement

Leave a Reply