ಮರಣದಂಡನೆ ಶಿಕ್ಷೆಯನ್ನ ರದ್ದುಗೊಳಿಸಿದ ಈಕ್ವಟೋರಿಯಲ್‌ ಗಿನಿಯಾ!

masthmagaa.com:

ಈಕ್ವಟೋರಿಯಲ್‌ ಗಿನಿಯಾ ಅನ್ನೋ ಆಫ್ರಿಕಾ ದೇಶ ಮರಣದಂಡನೆ ಶಿಕ್ಷೆಯನ್ನ ರದ್ದುಗೊಳಿಸಿದೆ ಅಂತ ಅನೌನ್ಸ್‌ ಮಾಡಿದೆ. ಅಲ್ಲಿನ ಅಧ್ಯಕ್ಷ Teodoro Obiang Nguema Mbasogo ಹೊಸ ಪೀನಲ್‌ ಕೋಡ್‌ ಅಥ್ವಾ ದಂಡ ಸಂಹಿತೆಗೆ ಸೈನ್‌ ಮಾಡಿದ್ದಾರೆ. ಇದರೊಂದಿಗೆ ಈ ಹಿಂದೆಯಿದ್ದ ಮರಣದಂಡನೆ ಶಿಕ್ಷೆಯನ್ನ ತೆಗೆದು ಹಾಕಲಾಗಿದೆ ಅಂತ ಅಧ್ಯಕ್ಷರ ಮಗ ಉಪಾಧ್ಯಕ್ಷ Teodoro Nguema Obiang Mangue ಘೋಷಿಸಿದ್ದಾರೆ. ಈ ವಿಷಯ ಅಧಿಕೃತವಾಗಿ ಸರ್ಕಾರಿ ಜರ್ನಲ್‌ನಲ್ಲಿ ಪ್ರಕಟಣೆಗೊಂಡ 90 ದಿನದಲ್ಲಿ ಹೊಸ ಕ್ರಮ ಜಾರಿಗೊಳ್ಳುತ್ತೆ ಅಂತ ಹೇಳಲಾಗಿದೆ. ಇನ್ನು ಈ ಕ್ರಮ ನಮ್ಮ ದೇಶಕ್ಕೆ ಒಂದು ಐತಿಹಾಸಿಕ ನಿರ್ಧಾರ ಅಂತ ಅಲ್ಲಿನ ಪತ್ರಕರ್ತರೊಬ್ಬರು ಹೇಳಿದ್ದಾರೆ. ಅಂದ್ಹಾಗೆ ಈಕ್ವಟೋರಿಯಲ್‌ ಗಿನಿಯಾದಲ್ಲಿ ಅಧಿಕೃತವಾಗಿ 2014 ರಲ್ಲಿ ಕೊನೆ ಬಾರಿಗೆ ಮರಣದಂಡನೆ ಶಿಕ್ಷೆಯನ್ನ ವಿಧಿಸಲಾಗಿತ್ತು ಅಂತ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಹೇಳಿದೆ. ಆದ್ರೆ ಅಂತಾರಾಷ್ಟ್ರೀಯ NGOಗಳು ಹಾಗೂ UN ಮಾತ್ರ ಆರೋಪಿಗಳು ನಾಪ್ಪತ್ತೆಯಾಗೋದು ಹಾಗೂ ಅಲ್ಲಿ ನಡೆಯೊ ಹಿಂಸಾಚಾರದ ವಿರುದ್ದ ಆರೋಪ ಮಾಡ್ತಾನೆ ಬಂದಿವೆ.

-masthmagaa.com

Contact Us for Advertisement

Leave a Reply