ಯಡಿಯೂರಪ್ಪಗೆ ಇನ್ ಡೈರೆಕ್ಟಾಗಿ ಡಿಚ್ಚಿಕೊಟ್ಟ ಈಶ್ವರಪ್ಪ..!

ಸಂಘಟನೆ ಮೀರಿ ಬೆಳೆಯಲು ಹೋದ್ರೆ ನಾಶ ಆಗೋದು ಗ್ಯಾರಂಟಿ ಅಂತ ಪರೋಕ್ಷವಾಗಿ ಯಡಿಯೂರಪ್ಪಗೆ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ತಾವೇ ಸಿಎಂ, ಏನು ಬೇಕಾದ್ರೂ ಮಾಡಬಹುದು ಎಂಬ ಸವಾಧಿಕಾರಿ ಧೋರಣೆಯಿಂದ ಕಾಂಗ್ರೆಸ್ಸೇ ನಿರ್ನಾಮ ಆಗೋಯ್ತು. ಕೇವಲ ಸಿದ್ದರಾಮಯ್ಯ ಮಾತ್ರವಲ್ಲ. ಈ ಮಾತು ಜೆಡಿಎಸ್‍ನ ಕುಮಾರಸ್ವಾಮಿ ಆಗಿರಬಹುದು, ಬಿಜೆಪಿಯ ಯಡಿಯೂರಪ್ಪ ಆಗಿರಬಹುದು. ಎಲ್ಲರಿಗೂ ಈ ಮಾತು ಅನ್ವಯಿಸುತ್ತೆ. ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಿ ಬೇರೆ ಪಕ್ಷ ಮಾಡಿ 3-4 ಸ್ಥಾನಗಳನ್ನು ಗೆದ್ದರು. ಹೀಗಾಗಿ ಒಂದು ಪಕ್ಷದಿಂದ ಗೆದ್ದು ಬಂದ ಬಳಿಕ, ಅದನ್ನು ಮೀರಿ ಹೋಗಲು ಯತ್ನಿಸಬಾರದು. ನಾನೇ ಗೆಲ್ಲಿಸಿದ್ದು, ನಾನೇ ಎಲ್ಲರಿಗೂ ನಾಯಕ ಅಂತ ಭಾವಿಸಬಾರದು ಅಂತ ಯಡಿಯೂರಪ್ಪಗೆ ಇನ್ ಡೈರೆಕ್ಟ್ ಆಗಿ ಡಿಚ್ಚಿ ಚಿವುಟಿದ್ದಾರೆ. ಮುನಿಯಪ್ಪ ಅವರ ಸೋಲಿಗೆ ಕಾರಣವಾದ ರಮೇಶ್ ಕುಮಾರ್ ವಿರುದ್ಧ ದೂರು ನೀಡಿದರೂ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಅವರನ್ನು ಜೊತೆಯಲ್ಲಿಟ್ಟುಕೊಂಡು ಸಭೆ ನಡೆಸಿದ್ರು. ಪಕ್ಷದ್ರೋಹಿಗಳನ್ನು ದೂರವಿಟ್ಟು, ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕಿದಾಗಲೇ ಉದ್ಧಾರ ಸಾಧ್ಯ ಎಂದಿದ್ದಾರೆ.

Contact Us for Advertisement

Leave a Reply