ನ್ಯಾಟೋ ದೇಶದ ಮೇಲೆ ರಷ್ಯಾ ಹೆಲಿಕಾಪ್ಟರ್‌ ಹಾರಾಟ: ಎಸ್ಟೋನಿಯಾ ಕೊಟ್ಟ ಎಚ್ಚರಿಕೆ ಏನು?

masthmagaa.com:

ಲಿಥುವೇನಿಯಾ ಕಥೆ ಈ ರೀತಿ ಆದ್ರೆ ಇತ್ತ ರಷ್ಯಾದ ಪಕ್ಕದಲ್ಲಿರೋ ಮತ್ತೊಂದು ನ್ಯಾಟೋ ದೇಶ ಎಸ್ಟೋನಿಯಾ ಕೂಡ ಹೊಸ ಆರೋಪ ಮಾಡಿದೆ. ಎಸ್ಟೋನಿಯಾದ ವಾಯು ಪ್ರದೇಶದಲ್ಲಿ ರಷ್ಯಾದ ಯುದ್ದ ಹೆಲಿಕಾಪ್ಟರ್‌ಗಳು ಹಾರಾಟ ಮಾಡಿವೆ ಅಂತ ಹೇಳಿದ್ದು ಇದು ಖಂಡಿತಾ ಒಪ್ಪಿಕೊಳ್ಳೋಕಾಗದ ಕ್ರಮ ಅಂತ ಕಿಡಿಕಾರಿದೆ. ಇದಕ್ಕೆ ಸಂಬಂಧಿಸಿದಂತೆ ಎಸ್ಟೋನಿಯಾದಲ್ಲಿರೋ ರಷ್ಯಾ ರಾಯಭಾರಿಗೆ ಅಲ್ಲಿನ ಸರ್ಕಾರ ಸಮನ್ಸ್‌ ಕೂಡ ಜಾರಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಎಸ್ಟೋನಿಯಾದ ವಿದೇಶಾಂಗ ಇಲಾಖೆ ʻ ಕಳೆದ ಎರಡು ವಾರಗಳಲ್ಲಿ ನಡೀತಿರೋ ಎರಡನೇ ಇನ್ಸಿಡೆಂಟ್‌ ಇದು. ಎಸ್ಟೋನಿಯಾ, ಇಂತಹ ವಿಷಾದನೀಯ ಹಾಗೂ ಗಂಭೀರ ಘಟನೆಗಳನ್ನ ಎಚ್ಚರದಿಂದ ಪರಿಗಣಿಸುತ್ತೆ. ಇದು ನಿಸ್ಸಂಶಯವಾಗಿ ಆತಂಕಕಾರಿ ಇದನ್ನ ಒಪ್ಪಿಕೊಳ್ಕೋಕೆ ಸಾದ್ಯವೇ ಇಲ್ಲಅಂತ ಆಕ್ರೋಶ ಹೊರಹಾಕಿದೆ.

-masthmagaa.com

Contact Us for Advertisement

Leave a Reply