ಯುರೋಪಿಯನ್‌ ಕಮಿಷನ್‌ ಒಪ್ಪಂದ ಮುರಿದ ಆಸ್ಟ್ರಾಝೆನೆಕಾ ಕಂಪನಿಗೆ ಸಂಕಷ್ಟ

masthmagaa.com:

ಜಗತ್ತಿನಾದ್ಯಂತ ಕೊರೋನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ. ವಿವಿಧ ದೇಶಗಳು ವಿವಿಧ ಕಂಪನಿಗಳ ಜೊತೆ ತಮಗೆ ಬೇಕಾದ ಲಸಿಕೆಗೆ ಒಪ್ಪಂದ ಮಾಡಿಕೊಂಡಿವೆ, ಮಾಡಿಕೊಳ್ತಿವೆ. ಹೀಗೆ ಲಸಿಕೆ ಖರೀದಿಗೆ ಸಂಬಂಧಿಸಿದಂತೆ ಆಸ್ಟ್ರಾಝೆನೆಕಾ ಕಂಪನಿ ಜೊತೆ ಯುರೋಪಿಯನ್ ಕಮಿಷನ್ ಒಪ್ಪಂದ ಮಾಡಿಕೊಂಡಿತ್ತು. ಆದ್ರೆ ಆ ಒಪ್ಪಂದವನ್ನ ಆಸ್ಟ್ರಾಝೆನೆಕಾ ಉಲ್ಲಂಘಿಸಿದ ಹಿನ್ನೆಲೆ, ಮುರಿದ ಹಿನ್ನೆಲೆ ಅದರ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದೇವೆ ಅಂತ ಯುರೋಪಿಯನ್ ಕಮಿಷನ್ ಹೇಳಿದೆ. ಅಂದ್ಹಾಗೆ 30 ಕೋಟಿ ಡೋಸ್​ಗಳಿಗಾಗಿ ಆಸ್ಟ್ರಾಝೆನೆಕಾ ಜೊತೆ ಯುರೋಪಿಯನ್ ಯೂನಿಯನ್ ಅಗ್ರೀಮೆಂಟ್ ಮಾಡಿಕೊಂಡಿತ್ತು. ಈ ಲಸಿಕೆಯನ್ನ ತನ್ನ 27 ಸದಸ್ಯ ರಾಷ್ಟ್ರಗಳಿಗೆ ಪೂರೈಸುವ ಉದ್ದೇಶ ಹೊಂದಿತ್ತು ಯುರೋಪಿಯನ್ ಒಕ್ಕೂಟ. ಆದ್ರೆ ಆಸ್ಟ್ರಾಝೆಜೆನೆಕಾ ಕಂಪನಿ 2021ರ ಮೊದಲ ತ್ರೈ ಮಾಸಿಕದಲ್ಲಿ ಕೇವಲ 3 ಕೋಟಿಯಷ್ಟು ಡೋಸ್​ಗಳನ್ನ ಡೆಲಿವರಿ ಮಾಡಿದೆ. ಜೊತೆಗೆ ಎರಡನೇ ತ್ರೈ ಮಾಸಿಕದಲ್ಲಿ 18 ಕೋಟಿ ಡೋಸ್​ಗಳನ್ನ ಪೂರೈಸೋದಾಗಿ ಹೇಳಿತ್ತು. ಆದ್ರೀಗ 7 ಕೋಟಿ ಡೋಸ್​ ಪೂರೈಸಲು ಮಾತ್ರ ಸಾಧ್ಯ ಅಂತಿದೆ. ಹೀಗಾಗಿ ಕಂಪನಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ ಯುರೋಪಿಯನ್ ಕಮಿಷನ್.

-masthmagaa.com

Contact Us for Advertisement

Leave a Reply