ಮಗಳ ಮೇಲೆ ಅತ್ಯಾಚಾರ ಎಸಗಿದವನನ್ನು ಕೊಂದ ತಂದೆ!

masthmagaa.com:

ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನ ಬಾಲಕಿಯ ತಂದೆಯೇ ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಗೋರಖ್​​ಪುರ್​​ನಲ್ಲಿ ನಡೆದಿದೆ. ಅದು ಕೂಡ ಜಿಲ್ಲಾ ನ್ಯಾಯಾಲಯ ಆವರಣದಲ್ಲೇ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನ ದಿಲ್ಶಾದ್​ ಹುಸ್ಸೇನ್​ ಅಂತ ಹೇಳಲಾಗಿದೆ. ಬಾಲಕಿಯ ತಂದೆಯನ್ನ ನಿವೃತ್ತ ಬಿಎಸ್​​ಎಫ್​ ಯೋಧ ಭಗವತ್​ ನಿಶಾದ್​ ಅಂತ ಹೇಳಲಾಗಿದೆ. ಅಂದ್ಹಾಗೆ ಆರೋಪಿ ದಿಲ್ಶಾದ್​ ಹುಸ್ಸೇನ್​, 2020ರ ಫೆಬ್ರವರಿಯಲ್ಲಿ ಭಗವತ್​ ನಿಶಾದ್​ ಅವರ ಅಪ್ರಾಪ್ತ ಮಗಳನ್ನ ಕಿಡ್ನಾಪ್​ ಮಾಡಿದ್ದ. ಈ ಬಗ್ಗೆ ನಿಶಾದ್​ ಕಂಪ್ಲೇಂಟ್​ ಕೊಟ್ಟಿದ್ರು. ಆರೋಪಿ ವಿರುದ್ಧ ಅಪಹರಣ​ ಮತ್ತು ಅತ್ಯಾಚಾರ ಕೇಸ್​ ದಾಖಲಾಗಿತ್ತು. ಇದಾಗಿ ಒಂದು ವರ್ಷದ ಬಳಿಕ ಹೈದ್ರಾಬಾದ್​​ನಲ್ಲಿ ಆರೋಪಿಯನ್ನ ಸೆರೆ ಹಿಡಿದ ಪೊಲೀಸರು ಬಾಲಕಿಯನ್ನ ರೆಸ್ಕ್ಯೂ ಮಾಡಿದ್ರು. ಇದೀಗ ಆರೋಪಿಯನ್ನ ಗುಂಡಿಟ್ಟು ಕೊಂದಿರೋ ಬಾಲಕಿಯ ತಂದೆಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply