ಯುನೈಟೆಡ್​ ಕಿಂಗ್​​ಡಮ್​​ನಲ್ಲಿ ಸಿಗ್ತಿಲ್ಲ ಅತ್ಯಾವಶ್ಯಕ ವಸ್ತುಗಳು! ಯಾಕೆ ಗೊತ್ತಾ?

masthmagaa.com:

ಯುನೈಟೆಡ್​ ಕಿಂಗ್​​ಡಮ್​​ನಲ್ಲಿ ಬ್ರೆಕ್ಸಿಟ್ ಮತ್ತು ಮಹಾಮಾರಿಯ ಹೊಡೆತದ ಎಫೆಕ್ಟ್ ಕಾಣೋಕೆ ಶುರುವಾಗಿದೆ. ಲಂಡನ್​​​ನ ಹಲವಾರು ಗ್ರೋಸರಿ ಅಂಗಡಿಗಳಲ್ಲಿ ಹಾಲು ಮತ್ತು ನೀರಿನಂತಹ ಮೂಲಭೂತ ವಸ್ತುಗಳ ಕೊರತೆ ಎದುರಾಗ್ತಿದೆ. ಪೂರೈಕೆ ಸರಪಳಿ ಅಸ್ತವ್ಯಸ್ಥವಾಗಿದ್ದು, ಹಲವು ವ್ಯಾಪಾರಿಗಳು ಚಿಂತಿತರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಲಂಡನ್​​​​ನಲ್ಲಿ ಅಂಗಡಿ ಇಟ್ಟುಕೊಂಡಿರೋ ಸತ್ಯನ್ ಪಟೇಲ್ ಅನ್ನೋರು, ಕಳೆದ ವಾರ ನಮ್ಮ ಅಂಗಡಿಯಲ್ಲಿ ಕೋಕೋ ಕೋಲಾ ಖಾಲಿಯಾಯ್ತು. ಉತ್ಪನ್ನಗಳೇ ಇಲ್ಲದೇ ಬ್ಯುಸಿನೆಸ್ ಕೂಡ ಆಗೋದಿಲ್ಲ. ಖಾಲಿ ಸೆಲ್ಫ್​​ಗಳನ್ನು ನೋಡಿ, ಗ್ರಾಹಕರು ಕೂಡ ಅಂಗಡಿಗೆ ಬರೋದಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ. ಕೊರೋನಾ ಮಹಾಮಾರಿಯಿಂದಾಗಿ ವಿಶ್ವದಾದ್ಯಂತ ಪೂರೈಕೆ ಸರಪಳಿ ಮೇಲೆ ಪ್ರಭಾವ ಉಂಟಾಗಿದೆ. ಇದು ಒಂದು ಕಾರಣವಾದ್ರೆ ಮತ್ತೊಂದು ಕಾರಣ ಬ್ರೆಕ್ಸಿಟ್​. ಅಂದ್ರೆ ಯೂರೋಪಿಯನ್ ಯೂನಿಯನ್​​ನಿಂದ ಯುನೈಟೆಡ್ ಕಿಂಗ್​ಡಮ್ ಹೊರಬಂದಿತ್ತು. 1973ರಲ್ಲಿ ಸ್ಥಾಪನೆಯಾಗಿದ್ದ ಯೂರೋಪಿಯನ್ ಯೂನಿಯನ್​ನಲ್ಲಿ 47 ವರ್ಷಗಳ ಕಾಲ ಇದ್ದ ಯುನೈಟೆಡ್​ ಕಿಂಗ್​ಡಮ್​​, ಕಳೆದ ವರ್ಷ ಕೊನೆಯಲ್ಲಿ ಹೊರಬಂದಿತ್ತು. ಅಂದಹಾಗೆ ಯೂರೋಪಿಯನ್ ಯೂನಿಯನ್​ನಿಂದ ಹೊರಬಂದ ಮೊದಲ ಮತ್ತು ಏಕೈಕ ದೇಶ ಇದಾಗಿದೆ. ಹೀಗೆ ಯೂರೋಪಿಯನ್ ಒಕ್ಕೂಟದಿಂದ ಹೊರಬಂದ ಬಳಿಕ ಯುನೈಟೆಡ್ ಕಿಂಗ್​ಡಮ್​​ ಪೂರೈಕೆ ಸರಪಳಿಯಲ್ಲಿ ವ್ಯತ್ಯಾಸವಾಗಿದೆ. ಮತ್ತೊಂದ್ಕಡೆ ಯುನೈಟೆಡ್​ ಕಿಂಗ್​ಡಮ್​​ನಲ್ಲಿ ಕೆಲಸ ಮಾಡುತ್ತಿದ್ದವರು ಕೊರೋನ ಅಂತ ಊರಿಗೆ ಹೋದವರು ಇನ್ನೂ ಬಂದಿಲ್ಲ. ಇದ್ರಿಂದಾಗಿ ಯುನೈಟೆಡ್​ ಕಿಂಗ್​ಡಮ್​​ನಲ್ಲಿ ಕಡಿಮೆ ಅಂದ್ರೂ 1 ಲಕ್ಷದಷ್ಟು ಡ್ರೈವರ್​ಗಳ ಕೊರತೆ ಎದುರಾಗಿದೆ ಅಂತ ಮಾಹಿತಿ ಲಭ್ಯವಾಗಿದೆ

-masthmagaa.com

Contact Us for Advertisement

Leave a Reply