ಕಾಶ್ಮೀರ ವಿಚಾರದಲ್ಲಿ ನಾವು ಯಾವತ್ತೂ ಮೂಗು ತೂರಿಸಲ್ಲ: ತಾಲಿಬಾನ್

masthmagaa.com:

ಕಾಶ್ಮೀರ ಸಂಬಂಧ ತಾಲಿಬಾನ್ ಯಾವತ್ತೂ ಮೂಗು ತೂರಿಸಲ್ಲ ಅಂತ ಹಕ್ಕಾನಿ ಗುಂಪಿನ ಅನಾಸ್ ಹಕ್ಕಾನಿ ಹೇಳಿದ್ದಾರೆ. ಕಾಶ್ಮೀರ ವಿಚಾರ ನಮ್ಮ ವ್ಯಾಪ್ತಿಗೆ ಬರೋದಿಲ್ಲ. ನಮಗೂ ಅದಕ್ಕೂ ಸಂಬಂಧವೇ ಇಲ್ಲ. ಕಾಶ್ಮೀರದಲ್ಲಿ ಭಯೊತ್ಪಾದನ ಚಟುವಟಿಕೆ ನಡೆಸೋ ಪಾಕ್ ಬೆಂಬಲಿತ ಉಗ್ರ ಸಂಘಟನೆಗಳಿಗೂ ನಮ್ಮಿಂದ ಯಾವುದೇ ಸಹಾಯ ಸಿಗಲ್ಲ ಅಂತ ಅವ್ರು ಹೇಳಿದ್ದಾರೆ. ಜೊತೆಗೆ ಭಾರತದೊಂದಿಗೆ ನಾವು ಉತ್ತಮ ಸಂಬಂಧ ಹೊಂದಲು ಬಯಸ್ತೀವಿ. ಭಾರತ ಕಳೆದ ಇಪ್ಪತ್ತು ವರ್ಷಗಳಲ್ಲಿ ನಮ್ಮ ವಿರೋಧಿಗಳಿಗೇ ಸಹಾಯ ಮಾಡಿಕೊಂಡು ಬಂದಿತ್ತು. ಆದರೂ ಅದೆಲ್ಲ ಮರೆತು ನಾವು ಭಾರತದೊಂದಿಗೆ ಸಂಬಂಧವನ್ನ ನೆಕ್ಸ್ಟ್ ಲೆವೆಲ್ ಗೆ ತಗೊಂಡುಹೋಗಲು ಬಯಸುತ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply